ಪ್ರದೀಪ್ ವರ್ಮಾ ನಿರ್ದೇಶನದ ‘ಊರ್ವಿ' ಸಿನಿಮಾ ಈಗಾಗಲೇ ಚಿತ್ರಮಂದಿರಗಳಿಗೆ ಬಂದಿವೆ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಹಿಂದೆ ಬೇರೊಂದು ಕತೆ ಇದೆ. ಈ ಚಿತ್ರದ ಮೂಲ ಹೆಸರು ಹಾಗೂ ಮೂಲ ಪಾತ್ರಧಾರಿಗಳೇ ಬೇರೆ. ಜತೆಗೆ ಒಂದು ಅದ್ಧೂರಿ ಫೋಟೋ ಶೂಟ್ ಜತೆಗೆ ಟೀಸರ್ ಕೂಡ ರೆಡಿ ಮಾಡಿದ್ದರು. ಅಲ್ಲದೆ ಕಲರ್ಫುಲ್ ಕ್ಯಾಲೆಂಡರ್ ಶೂಟ್ ಕೂಡ ಮಾಡಲಾಗಿತ್ತು. ಇಷ್ಟೆಲ್ಲ ಮಾಡಿದ ಮೇಲೆ ಇದ್ದಕ್ಕಿದಂತೆ ಕಲಾವಿದರು ಹಾಗೂ ಹೆಸರನ್ನು ಬದಲಾಯಿ¬ಸಿಕೊಂಡು ಈಗ ‘ಉರ್ವಿ'ಯಾಗಿ ಪ್ರೇಕ್ಷಕರ ಮುಂದೆ ಬಂದಿದೆ.

ಅಂದಹಾಗೆ ‘ಉರ್ವಿ'ಯ ನಿಜವಾದ ಹೆಸರು ‘ಗುಲಾಬಿ ಸ್ಟ್ರೀಟ್'. ಈ ಚಿತ್ರದ ಅಸಲಿ ಪಾತ್ರಧಾರಿಗಳು ಮೇಘನಾ ಗಾಂವ್ಕರ್, ಭಾವನಾ ರಾವ್, ಹರ್ಷಿಕಾ ಪೂಣಚ್ಚ ಹಾಗೂ ಶ್ವೇತಾ ಪಂಡಿತ್. ಈ ನಡುವೆ ಅನಿತಾ ಭಟ್ ಕೂಡ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮಾತು¬ಕತೆ ನಡೆಯುತ್ತಿತ್ತು. ನಿರ್ದೇ¬ಶಕರೂ ಪ್ರದೀಪ್ ವರ್ಮಾ ಅವರೇ ಆಗಿದ್ದರು.

ಆದರೆ, ನಿರ್ದೇಶಕರನ್ನು ಹೊರತುಪಡಿಸಿ ನಿರ್ಮಾ¬¬ಪ¬ಕರು, ಕಲಾವಿದರು ಆಗಾಗ ಬದಲಾ¬ಗುತ್ತಲೇ ಇದ್ದರು. ಹೀಗಾಗಿ ಚಿತ್ರತಂಡದಲ್ಲಿ ಸಾಕಷ್ಟುಗೊಂದಲ ಕೂಡ ಶುರುವಾಗಿ ಕೆಲವರು ತಾವಾಗಿಯೇ ಸಿನಿಮಾದಿಂದ ಹೊರ ನಡೆದರೆ, ಇನ್ನು ಕೆಲವರನ್ನು ಯಾಕಾಗಿ ಚಿತ್ರ¬ದಿಂದ ಕೈ ಬಿಡಲಾಗಿದೆ ಎನ್ನುವ ಬಗ್ಗೆ ಯಾವ ಸ್ಪಷ್ಟೀಕರಣವೂ ಇಲ್ಲ. ‘ಈ ಚಿತ್ರದ ಮೂವರು ನಾಯಕಿಯರ ಪೈಕಿ ನಾನೂ ಒಬ್ಬಳು. ಚಿತ್ರದ ಫೋಟೋ ಶೂಟ್, ಟೀಸರ್ ಕೂಡ ಮಾಡಲಾ¬ಗಿತ್ತು. ಚಿತ್ರತಂಡದಲ್ಲಿ ಪದೇ ಪದೇ ಬದಲಾ¬ವಣೆ¬ಗಳನ್ನು ಮಾಡುತ್ತಿದ್ದರು. ಜತೆಗೆ ಅದೇ ಸಮಯಕ್ಕೆ ನಾನು ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರಕ್ಕೂ ನಾಯಕಿಯಾಗಿದ್ದೆ. ಹೀಗಾಗಿ ಡೇಟ್ಸ್ ಸಮಸ್ಯೆ ಆಯಿತು. ಹೀಗಾಗಿ ನಾನು ಈಗ ‘ಉರ್ವಿ' ಎನ್ನುತ್ತಿರುವ ‘ಗುಲಾಬಿ ಸ್ಟ್ರೀಟ್' ಚಿತ್ರದಿಂದ ಹೊರ ಬಂದೆ. ಆದರೆ, ಉಳಿ ದವರ ಬಗ್ಗೆ ನನಗೆ ಮಾಹಿತಿ ಇಲ್ಲ' ಎನ್ನುವುದು ಮೇಘನಾ ಗಾಂವ್ಕರ್ ಅವರ ವಿವರಣೆ.

ಮೇಘನಾ ಈಗೇನು ಮಾಡುತ್ತಿದ್ದಾರೆ?

ಸದ್ಯಕ್ಕೆ ಅವರು ವಿದ್ಯಾರ್ಥಿಯಾಗುವ ತಯಾರಿಯಲ್ಲಿದ್ದಾರೆ. ಇದು ಸಿನಿಮಾ ವಿಷಯ ಅಲ್ಲ. ನಿಜ ಸುದ್ದಿ. ಮೇಘನಾ ಅವರು ಪಿಎಚ್ಡಿ ಪದವಿ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನೆಟ್ ಪರೀಕ್ಷೆ ಬರೆದು ಪಾಸ್ ಆಗಿರುವ ಮೇಘನಾ, ಎಪ್ರಿಲ್ನಿಂದ ಅವರ ಅಧ್ಯಯನ ಶುರುವಾಗಲಿದೆ. ಅಂದಹಾಗೆ ಅವರೇ ಅಧ್ಯ¬ ಯನ ವಿಷಯ ಸಿನಿಮಾ ಸಾಹಿತ್ಯ. ಮುಂಬೈ ವಿವಿಯಲ್ಲಿ ಡಾ. ಶೋಭ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಲಿ¬ ದ್ದಾರೆ. ಮೇಘನಾ ಗಾಂವ್ಕರ್ ಅವರ ಈ ವಿದ್ಯಾರ್ಥಿ ಜೀವನದ ನಡುವೆ ಆಗಾಗ ಸಿನಿಮಾ ಕತೆಗಳನ್ನೂ ಕೇಳುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಅವರ ಹೊಸ ಸಿನಿಮಾವೊಂದು ಸೆಟ್ಟೇರಲಿದೆ.

ವರದಿ: ಕನ್ನಡ ಪ್ರಭ, ಸಿನಿವಾರ್ತೆ