ಕಾಫಿ ವಿತ್‌ ಕರಣ್‌ ಶೋನಲ್ಲಿ  ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಮತ್ತು ಪತ್ನಿ ಮೀರಾ ರಜಪೂತ್‌  ತಮ್ಮ ಲವ್‌ಸ್ಚೋರಿಯನ್ನ ಬಿಚ್ಚಿಟ್ಟಿದ್ದಾರೆ. ಶಾಹಿದ್ ಹಾಗು ಮೀರಾ ರಜಪೂತ್ ಮದುವೆ ಬಗ್ಗೆ ಮನೆಯವರಿಗೆ ತಿಳಿಸಿದಾಗ ಮೊದಲು ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲವಂತೆ.

ಮುಂಬೈ(ಜ.03): ಕಾಫಿ ವಿತ್‌ ಕರಣ್‌ ಶೋನಲ್ಲಿ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಮತ್ತು ಪತ್ನಿ ಮೀರಾ ರಜಪೂತ್‌ ತಮ್ಮ ಲವ್‌ಸ್ಚೋರಿಯನ್ನ ಬಿಚ್ಚಿಟ್ಟಿದ್ದಾರೆ.

ಶಾಹಿದ್ ಹಾಗು ಮೀರಾ ರಜಪೂತ್ ಮದುವೆ ಬಗ್ಗೆ ಮನೆಯವರಿಗೆ ತಿಳಿಸಿದಾಗ ಮೊದಲು ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲವಂತೆ. ಇದಕ್ಕೆ ಕಾರಣ ನನ್ನ ಹಾಗೂ ಶಾಹಿದ್‌ ನಡುವಿನ ವಯಸ್ಸಿನ ವ್ಯತ್ಯಾಸ.

ಶಹೀದ್ ಹಾಗೂ ಮೀರಾ ನಡುವೆ 13 ವರ್ಷದ ಅಂತರವಿದೆ ಹೀಗಾಗಿ ಆತನನ್ನು ಮದುವೆ ಆಗೋದು ಬೇಡ ಅಂದಿದ್ದರಂತೆ. ಆದರೆ ನಮ್ಮಿಬ್ಬರ ಪ್ರೀತಿ ನಮ್ಮನ್ನು ದೂರ ಮಾಡದೇ ಒಟ್ಟುಗೂಡಿಸಿತು ಅಂತ ಮೀರಾ ಉತ್ತರಿಸಿದ್ದಾರೆ.