ಬೆಂಗಳೂರು(ಮೇ.12): ಇಬ್ಬರು ಖಳನಟರ ಸಾವಿನಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ  ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ವಿಭಿನ್ನ ಗೆಟಪ್‌'ನಲ್ಲಿ ಕಾಣಿಸಿಕೊಂಡಿರುವ ದುನಿಯಾ ವಿಜಿಗೆ ಅಮೂಲ್ಯ ಕೃತಿ ಕರಬಂದಾ ಜೋಡಿಯಾಗಿದ್ದಾರೆ.

ಸುಮಾರು 15 ಕೋಟಿ ಬಜೆಟ್'​ನ ಈ ಚಿತ್ರದ ದುರಂತ ಕಥೆನೂ ಇದೆ. ಸಿನಿಮಾ ರಿಯಲಿಸ್ಟಿಕ್ ಆಗಿ ಬರಲೇಬೇಕು ಅಂತ ಚಿತ್ರದ ಖಳನಾಯಕರಾದ ಅನಿಲ್ ಮತ್ತು ಉದಯ್ ಒಂದ್ ಸಾಹಸ ಮಾಡಿದರು. ತಿಪ್ಪಗೊಂಡನಹಳ್ಳಿಯಲ್ಲಿ ನಡೆದ ಶೂಟಿಂಗ್ ನಲ್ಲಿ ಇಬ್ಬರು ಜೀವವನ್ನೇ ಕಳೆದುಕೊಂಡರು.ಅಂದಿನಿಂದ ಈ ಚಿತ್ರದ ಬಗ್ಗೆ ಒಂದು ಕಾಳಜಿ ಶುರುವಾಗಿ ಜನರ ಗಮನವನ್ನೂ ಸೆಳೆಯಿತು. ಸಾವಿನ ಜಿಗಿತ ಎಂಬ ಕರಾಳ ಹಣೆಪಟ್ಟಿನೂ ಬಂತು.

ಚಿತ್ರದಲ್ಲಿ ಹುಲಿ ರಕ್ಷಣೆಯ ಮಹತ್ವದ ವಿಷಯವಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ 300 ಕ್ಕೂ ಹೆಚ್ಚು ಥಿಯೇಟರ್​'ನಲ್ಲಿ ಮಾಸ್ತಿ ಗುಡಿ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ರಂಗಾಯಣ್ ರಘು, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಅಭನಯಿಸಿದ್ದಾರೆ. ಸಾಧುಕೋಕಿಲಾ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ತಾವೇ ಚಿತ್ರಕಥೆ ಬರೆದು ಅಭಿನಯಿಸಿರೋ ದುನಿಯಾ ವಿಜಿ, ಗೆಲುವಿನ ನಿರೀಕ್ಷೆಯಲ್ಲಿದೆ. ಇದಕ್ಕೆ ಜನ ಕೊಡುವ ಅಂಕಗಳು ಎಷ್ಟು ಎನ್ನುವುದಕ್ಕೆ ಇಂದು ಮಧ್ಯಾಹ್ನದ ತನಕ ಕಾಯಬೇಕಿದೆ.