Adinath Urmila Separation: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ನಟಿ ಊರ್ಮಿಳಾ ಕಾನಿಟ್ಕರ್ 15 ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಮಗಳು ಜಿಝಾಳ ಪಾಲನೆಗಾಗಿ ಜೊತೆಯಾಗಿ ಇರುವುದಾಗಿ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಗುರುವಾರ ಈ ಜೋಡಿ, ತಾವು ಬೇರೆ ಬೇರೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಪರಸ್ಪರ ಒಪ್ಪಿಗೆಯಿಂದ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ಮಗಳು ಜಿಝಾಳ ಪಾಲನೆಯೇ ನಮ್ಮ ಮೊದಲ ಆದ್ಯತೆ, ಅವಳಿಗಾಗಿ ನಾವು ಜೊತೆಯಾಗಿಯೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಂಟಿ ಹೇಳಿಕೆ

ಈ ಜೋಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿ ಹೇಳಿಕೆಯೊಂದನ್ನು ಹಂಚಿಕೊಂಡಿದೆ. "ನಮ್ಮ ಸ್ನೇಹಿತರು, ಮಾಧ್ಯಮದವರು ಮತ್ತು ಹಿತೈಷಿಗಳ ಗಮನಕ್ಕೆ, ಸಾಕಷ್ಟು ಆಲೋಚನೆಯ ನಂತರ, ನಾನು, ಆದಿನಾಥ್ ಎಂ ಕೊಠಾರೆ ಮತ್ತು ಊರ್ಮಿಳಾ ಕಾನಿಟ್ಕರ್, ಗಂಡ-ಹೆಂಡತಿಯಾಗಿ ಬೇರೆಯಾಗಲು ಪರಸ್ಪರ ಒಪ್ಪಿಗೆಯಿಂದ ನಿರ್ಧರಿಸಿದ್ದೇವೆ. ದಂಪತಿಯಾಗಿ ನಮ್ಮ ಪ್ರಯಾಣ ಮುಗಿದಿದ್ದರೂ, ನಮ್ಮ ಮಗಳು ಜಿಝಾಳ ಬಗ್ಗೆ ನಮ್ಮ ಬದ್ಧತೆ ಹಾಗೆಯೇ ಇರುತ್ತದೆ. ಅವಳೇ ನಮ್ಮ ಮೊದಲ ಆದ್ಯತೆ. ಅವಳು ಪ್ರೀತಿ, ಭದ್ರತೆ ಮತ್ತು ಬೆಂಬಲದಿಂದ ಬೆಳೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಖುಷಿಯಿಂದ ಮತ್ತು ಸಮರ್ಪಣಾಭಾವದಿಂದ ಜಂಟಿಯಾಗಿ ಪೋಷಕರಾಗಿ ಮುಂದುವರಿಯುತ್ತೇವೆ."

"ಇಷ್ಟು ವರ್ಷಗಳ ಕಾಲ ನೀವು ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಜೀವನದ ಈ ಹೊಸ ಅಧ್ಯಾಯದಲ್ಲಿಯೂ ನೀವು ನಮ್ಮನ್ನು ಹೀಗೆಯೇ ಹರಸುತ್ತೀರಿ ಎಂದು ನಂಬಿದ್ದೇವೆ." "ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಮಾಧ್ಯಮ ಮಿತ್ರರು ಮತ್ತು ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ. ಈ ವಿಷಯದ ಬಗ್ಗೆ ಇದೇ ನಮ್ಮ ಮೊದಲ ಮತ್ತು ಕೊನೆಯ ಹೇಳಿಕೆಯಾಗಿರುತ್ತದೆ. ಈ ಬಗ್ಗೆ ನಾವು ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವೃತ್ತಿ ಮತ್ತು ವೈಯಕ್ತಿಕ ಜೀವನ

ಆದಿನಾಥ್ ಕೊಠಾರೆ ಮತ್ತು ಊರ್ಮಿಳಾ ಕಾನಿಟ್ಕರ್ 2011ರಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಜಿಝಾ ಎಂಬ ಮಗಳಿದ್ದಾಳೆ. ಆದಿನಾಥ್ ಕೊಠಾರೆ ಅವರು 2019ರಲ್ಲಿ 'ಪಾನಿ' ಎಂಬ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈ ಚಿತ್ರದಲ್ಲಿ ಅವರು ನಾಯಕನಾಗಿಯೂ ನಟಿಸಿದ್ದು, ರುಚಾ ವೈದ್ಯ ನಾಯಕಿಯಾಗಿದ್ದರು. ಸದ್ಯ ಅವರು ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಮತ್ತು ಯಶ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಊರ್ಮಿಳಾ ಕಾನಿಟ್ಕರ್ ಬಗ್ಗೆ ಹೇಳುವುದಾದರೆ, ಅವರು 'ಮಲಾ ಆಯಿ ವ್ಹಾಯ್ಚಿ!', 'ಆಟೋಗ್ರಾಫ್ - ಏಕ್ ಜಪುನ್ ಠೇವಾವಿ ಆಶಿ ಲವ್‌ಸ್ಟೋರಿ', 'ದುನಿಯಾದಾರಿ', 'ಪ್ಯಾರ್ ವಾಲಿ ಲವ್ ಸ್ಟೋರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.