ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸುತ್ತಿದ್ದು ಚಿತ್ರೋದ್ಯಮದ ಅನೇಕ ಗಣ್ಯರು ಅವರ ಪರವಾಗಿ ನಿಂತಿದ್ದಾರೆ. ದರ್ಶನ್ ಹಾಗೂ ಯಶ್ ಸುಮಲತಾಗೆ ಸಾಥ್ ನೀಡಿರುವುದು ಗಮನ ಸೆಳೆದಿದೆ.

ಪ್ರಚಾರದಲ್ಲಿ ಬ್ಯುಸಿ ಆಗಿರುವ ದರ್ಶನ್ ರವರ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ ಲೇಔಟ್ ನಿವಾಸ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದರ ಹಿಂದಿನ ಕೈವಾಡ ಯಾರದು ಎಂದು ತಿಳಿದು ಬಂದಿಲ್ಲ. ಆದರೆ ಇದಕ್ಕೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತಿರುವ ಸುಮತಲಾ ಪರ ಪ್ರಚಾರ ಕಾರಣ ಎಂದು ಕೇಳಿ ಬರುತ್ತಿದೆ.

ಇನ್ನು ಪ್ರಚಾರದಲ್ಲಿ ಬ್ಯುಸಿ ಆಗಿರುವ ನಿಖಿಲ್ ನನ್ನು ನಡೆದಿರುವ ಘಟನೆ ಬಗ್ಗೆ ಕೇಳಿದರೆ ‘ಇಂತಹ ಕೆಲಸ ನಾವ್ಯಾಕೆ ಮಾಡೋಣ, ನಮ್ಮ ಮೇಲೂ ಆ ರೀತಿ ಪ್ರಯತ್ನ ಆಗಿದೆ. ನಮಗೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದನ್ನು ಯಾರೇ ಮಾಡಿದರೂ ಹೀಗೆಲ್ಲಾ ಮಾಡಬಾರದು’ ಎಂದು ಹೇಳಿದ್ದಾರೆ.