ತೆರೆ ಮೇಲೆ ಪ್ರಭಾಸ್ ನೋಡಲು ಅಭಿಮಾನಿಗಳು ಕೌಂಟ್ ಡೌನ್ ಶುರು ಮಾಡಿಕೊಂಡಿದ್ದಾರೆ. ಬಾಲಿವುಡ್ ಸಂಪೂರ್ಣ ಬೆಚ್ಚಿ ಬೆರಗಾಗಿಸುವಂತಹ ಬಿಗ್ ಬಜೆಟ್ ಮೇಕಿಂಗ್ ಸಿನಿಮಾ ಮುಂಗಡ ಬುಕಿಂಗ್ ಶುರುವಾಗಿದ್ದು ಕೆಲವೊಂದು ಚಿತ್ರಮಂದಿರಗಳು ಹೌಸ್ ಫುಲ್ ಆಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಾಹೋ ಸಿನಿಮಾ ಭೀತಿ!

 

ಇದೇ 30ರಂದು ಚಿತ್ರ ತೆರೆ ಕಾಣುತ್ತಿದ್ದು, ಜನರು ಕಾತರದಿಂದ ಕಾಯುತ್ತಿದ್ದಾರೆ.

ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!

ಆದರೆ ಇದರ ಮಧ್ಯೆ ತೆಲಂಗಾಣದಲ್ಲಿರುವ ಚಿತ್ರಮಂದಿರದ ಮುಂದೆ ಸಾಹೋ ಚಿತ್ರದ ಪ್ರಭಾಸ್ ಫೋಸ್ಟರ್ ಹಾಕುತ್ತಿದ್ದ ಮಾಹೋಬ್ ನಗರದ ವ್ಯಕ್ತಿಯೊಬ್ಬ ಕೇಬಲ್ ವೈರ್ ತಾಗಿ ಶಾಕ್ ನಿಂದ ಬಿಲ್ಡಿಂಗ್ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಪೊಲೀಸರು ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.