Asianet Suvarna News Asianet Suvarna News

ಸ್ನೇಹಿತನೊಂದಿಗೆ ಇದ್ದಾಗ ಬಾಲಿವುಡ್ ಹಾಟ್ ಬೆಡಗಿ ಮಲ್ಲಿಕಾ ಶರಾವತ್ ಮೇಲೆ ಹಲ್ಲೆ,ದರೋಡೆ

ಮಲ್ಲಿಕಾ ಶರಾವತ್ ಅವರು ತಮ್ಮ ಸ್ನೇಹಿತನೊಂದಿಗೆ ನ.16ರಂದು ರಾತ್ರಿ ತಾವು ಉಳಿದುಕೊಂಡಿದ್ದ ವಸತಿ ಗೃಹಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ ದರೋಡೆ ನಡೆಸಿದ್ದಾರೆ.

Mallika Sherawat teargassed beaten up in Paris apartment

ಪ್ಯಾರಿಸ್(ನ.17): ಬಾಲಿವುಡ್ ನಟಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಾಡಲ್ ಮಲ್ಲಿಕಾ ಶರಾವತ್ ಮೇಲೆ ಮುಸುಕುದಾರಿಗಳು ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ಪ್ರಾನ್ಸ್ ರಾಜಧಾನಿ ಪ್ಯಾರೀಸ್'ನ ಅಪಾರ್ಟ್'ಮೆಂಟ್ ಬ್ಲಾಕ್'ನಲ್ಲಿ ನಡೆದಿದೆ.

ಮಲ್ಲಿಕಾ ಶರಾವತ್ ಅವರು ತಮ್ಮ ಸ್ನೇಹಿತನೊಂದಿಗೆ ನ.16ರಂದು ರಾತ್ರಿ ತಾವು ಉಳಿದುಕೊಂಡಿದ್ದ ವಸತಿ ಗೃಹಕ್ಕೆ ಆಗಮಿಸಿದ ಸಂದರ್ಭದಲ್ಲಿ ಮೂವರು ಮಸುಕುದಾರಿಗಳು 40 ವರ್ಷದ ಬಾಲಿವುಡ್ ನಟಿ ಮಲ್ಲಿಕಾ ಶರಾವತ್ ಹಾಗೂ ಆಕೆಯ ಗೆಳಯನ ಮೇಲೆ ಹಲ್ಲೆ ಟಯರ್ ಗ್ಯಾಸ್ ಸಿಡಿಸಿ ಹಲ್ಲೆ ಮಾಡಿ ದರೋಡೆ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ  ಸ್ವಲ್ಪ ಹಾನಿಯುಂಟಾಗಿರುವುದು ಬಿಟ್ಟರೆ  ಪ್ರಾಣಾಪಾಯವಾಗಿಲ್ಲ.

ಮುಸುಕುದಾರಿಗಳು ಏನನ್ನು ಮಾತನಾಡದೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ನಂತರ ಇಬ್ಬರು ತುರ್ತು ಸೇವಾ ಘಟಕಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಪ್ಯಾರೀಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios