ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬೀದಿಗೆ  ಬಿದ್ದಿದ್ದಾರಂತೆ. ಸದ್ಯ ಪ್ಯಾರಿಸ್’ನಲ್ಲಿರುವ ಆಕೆ ಅಪಾರ್ಟ್’ಮೆಂಟ್ ಬಾಡಿಗೆಯನ್ನು ಕಟ್ಟಲಾಗದೇ  ಕಾಲಿ ಮಾಡಿದ್ದಾರೆ. ಹೀಗಂತ ಸುದ್ದಿ ಹರಿದಾಡಿದೆ. 

ನವದೆಹಲಿ (ಡಿ.15): ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬೀದಿಗೆ ಬಿದ್ದಿದ್ದಾರಂತೆ. ಸದ್ಯ ಪ್ಯಾರಿಸ್’ನಲ್ಲಿರುವ ಆಕೆ ಅಪಾರ್ಟ್’ಮೆಂಟ್ ಬಾಡಿಗೆಯನ್ನು ಕಟ್ಟಲಾಗದೇ ಕಾಲಿ ಮಾಡಿದ್ದಾರೆ. ಹೀಗಂತ ಸುದ್ದಿ ಹರಿದಾಡಿದೆ. ಆದರೆ ಈ ಗಾಸಿಪ್’ಗಳಿಗೆ ಸ್ವತಃ ಮಲ್ಲಿಕಾ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕೆಲವರು ಪ್ಯಾರಿಸ್’ನಲ್ಲಿ ನಾನು ಅಪಾರ್ಟ್ ಮೆಂಟ್ ಹೊಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಇದ್ಯಾವುದು ಕೂಡ ಸತ್ಯವಲ್ಲ, ಆದರೆ ಯಾರಾದರೂ ನನಗೆ ಕೊಡುಗೆ ನೀಡುವುದಾದಲ್ಲಿ ನಿಮ್ಮ ಅಡ್ರೆಸ್ ಕಳುಹಿಸಿ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪ್ಯಾರಿಸ್’ನಲ್ಲಿ ವಾಸವಿರುವ ಬಾಲಿವುಡ್ ನಟಿ ಮಲ್ಲಿಕಾ ಈಗ ಹಬ್ಬಿರುವ ಸುದ್ದಿಗಳೆಲ್ಲಾ ಶುದ್ಧ ಸುಳ್ಳು ಎಂದು ಸ್ವತಃ ಅವರೇ ಟ್ವಿಟರ್’ನಲ್ಲಿ ಸ್ಪಷ್ಟನೆ ನೀಡಿದ್ದಾರೆ.