ಮಲೆಗಳಲ್ಲಿ ಮದುಮಗಳು ನಾಟಕದ 'ಹುಲಿಯ' ಖ್ಯಾತಿಯ ಅನಿಲ್ ನಾಟಕದ ಬಗ್ಗೆ ಹೇಳುವುದೇನು?

entertainment | Saturday, February 3rd, 2018
Suvarna Web Desk
Highlights

ಕನ್ನಡಿಗರ ನೆಚ್ಚಿನ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ರಂಗಕ್ಕೆ ತಂದಿದ್ದು ಒಂದು ತಿಂಗಳಿಂದ ಬೆಂಗಳೂರಲ್ಲಿ ಪ್ರದರ್ಶನ  ಕಾಣುತ್ತಿದೆ. ಈ ನಾಟಕವು 2011 ರಲ್ಲಿ ಮೈಸೂರಿನಲ್ಲೂ 2013, 2015 ಹಾಗೂ 2017 ರಲ್ಲಿ  ಬೆಂಗಳೂರಲ್ಲೂ 80 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈ ಎಲ್ಲಾ ಪ್ರದರ್ಶನಗಳಲ್ಲಿ ‘ಹುಲಿಯ’ ಎಂಬ ನಾಯಿಯ ಪಾತ್ರವನ್ನು ಅನಿಲ್ ಮಾಡುತ್ತಿದ್ದಾರೆ. ಈ ಕಲಾವಿದನನ್ನು ‘ಖುಷಿ’ಗಾಗಿ ಮಾತಾಡಿಸಿದಾಗ.

ಬೆಂಗಳೂರು (ಫೆ.03): ಕನ್ನಡಿಗರ ನೆಚ್ಚಿನ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ರಂಗಕ್ಕೆ ತಂದಿದ್ದು ಒಂದು ತಿಂಗಳಿಂದ ಬೆಂಗಳೂರಲ್ಲಿ ಪ್ರದರ್ಶನ  ಕಾಣುತ್ತಿದೆ. ಈ ನಾಟಕವು 2011 ರಲ್ಲಿ ಮೈಸೂರಿನಲ್ಲೂ 2013, 2015 ಹಾಗೂ 2017 ರಲ್ಲಿ  ಬೆಂಗಳೂರಲ್ಲೂ 80 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈ ಎಲ್ಲಾ ಪ್ರದರ್ಶನಗಳಲ್ಲಿ ‘ಹುಲಿಯ’ ಎಂಬ ನಾಯಿಯ ಪಾತ್ರವನ್ನು ಅನಿಲ್ ಮಾಡುತ್ತಿದ್ದಾರೆ. ಈ ಕಲಾವಿದನನ್ನು ‘ಖುಷಿ’ಗಾಗಿ ಮಾತಾಡಿಸಿದಾಗ.

ಈ ‘ಹುಲಿಯ’ ಪಾತ್ರ ಸಿಕ್ಕಿದ್ದು ಹೇಗೆ?

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆಯಲ್ಲಿದ್ದಾಗ ಈ ನಾಟಕದಲ್ಲಿನ ಪಾತ್ರಗಳಿಗಾಗಿ ಬಂದ ಪ್ರಕಟಣೆ ನೋಡಿ ನಿರ್ದೇಶಕ ಬಸವಲಿಂಗಯ್ಯ ಅವರನ್ನು ಸಂಪರ್ಕಿಸಿದೆ. ಗುಂಪಲ್ಲಿ ಒಬ್ಬನಾದೆ. ಆನಂತರ ಹುಲಿಯನ ಪಾತ್ರಕ್ಕಾಗಿ ನನ್ನನ್ನೂ ಆಯ್ಕೆ ಮಾಡಿದರು.

ನಾಯಿ ಪಾತ್ರ ಮಾಡೋದು ಸುಲಭಾನಾ?

ರಿಹರ್ಸಲ್‌ನಲ್ಲಿ ಬಹಳ ಬೇಜಾರಾಯ್ತು. ಎಲ್ಲರಿಗೂ ಡೈಲಾಗ್ ಇರೋದು. ನನಗೆ ಮಾತೂ ಇಲ್ಲ. ಇಡೀ ನಾಟಕದಲ್ಲಿ ಅಲ್ಲಿಂದ ಇಲ್ಲಿಗೆ ತಿರುಗೋದೇ ಆಯ್ತು. ಅದು ಕಪ್ಪು ಬಟ್ಟೆ ಹಾಕಿ ಓಡಾಡಿದರೆ ಯಾರಿಗೆ ತಾನೆ ಗೊತ್ತಾಗುತ್ತೆ ಅನ್ನಿಸಿತ್ತು.

 ಖ್ಯಾತಿ ಪಡೆಯಲು ಸಾಧ್ಯವಾಗಿದ್ದು ಹೇಗೆ?

ನಿರ್ದೇಶಕರು, ಪ್ರಮೋದ ಶಿಗ್ಗಾಂವ್ ಸಾರ್, ಪ್ರಮೀಳಾ ಬೇಂದ್ರೆ ಹಾಗೂ ನಂದಿನಿ ಅವರು ನನಗೆ ಈ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸಿದ್ದಲ್ಲದೆ ಆ ಪಾತ್ರಕ್ಕೆ ಬೇಕಾದ ಬಾಡಿ ಲಾಂಗ್ವೇಜ್ ಅನ್ನು ಹೇಳಿಕೊಟ್ಟರು. ಅದು ನನಗೆ ಸ್ಫೂರ್ತಿಯಾಯ್ತು. ನಾಯಿಗಳನ್ನು ಗಮನಿಸಿ ಅದನ್ನು ಅಳವಡಿಸಿಕೊಂಡೆ.

ಈ ಪಾತ್ರ ಫೇಮಸ್ ಆಗಿದೆ ಅನಿಸಿದ್ದೆಂದು?

3 ನೇ ಪ್ರದರ್ಶನದಲ್ಲಿ ಒಬ್ಬರು ಬಂದು ಹಾರ ಹಾಕಿದ್ದರು. ಒಬ್ಬರು 40 ಸಾವಿರ ರುಪಾಯಿಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಅದನ್ನು ನಮ್ ತಂಡವರೊಂದಿಗೆ ಹಂಚಿಕೊಂಡಿದ್ದೆ. ಇಷ್ಟಲ್ಲದೇ ಕುವೆಂಪು ಅವರ ಮಗಳು ತಾರಿಣಿ ಅವರು, ಚಿದಾನಂದ ಗೌಡ್ರು, ಕಡಿದಾಳ್ ಶಾಮಣ್ಣ, ತೇಜಸ್ವಿ ಅವರ

ಪತ್ನಿ ರಾಜೇಶ್ವರಿ ಬಂದು ಮಾತಾಡಿಸಿದ್ರು. ಬೇರೆ ಬೇರೆ ಸಾಹಿತಿಗಳು ಕೂಡ ಬಂದು ನಾವು ಕಾದಂಬರಿಯಲ್ಲಿ ಓದಿದ್ದಂತೆಯೇ ಇದೆ ನಿಮ್ಮ ಹುಲಿಯ ಕ್ಯಾರೆಕ್ಟರ್ ಅಂದಿದ್ದಾರೆ. ಇದಕ್ಕಿಂತ ಬೇರೆ

ಪ್ರಶಂಸೆ ಬೇಕೆ?

2011 ರ ನಂತರ ಏನು ಮಾಡಿದಿರಿ?

ನಾಟಕ ಪ್ರದರ್ಶನ ಮುಗಿದ ನಂತರ ಮೈಸೂರಿನ ರಂಗಾಯಣದಲ್ಲಿ ಡಿಪ್ಲೊಮೋ ಇನ್ ಥಿಯೇಟರ್ ಕೋರ್ಸ್  ಮುಗಿಸಿದೆ. ನಾಟಕಗಳಲ್ಲಿ ಬ್ಯಾಕ್ ಸ್ಟೇಜ್, ಲೈಟಿಂಗ್ ಕೆಲಸ ಮಾಡ್ತಿದ್ದೆ. ಅದೂ ಅಲ್ಲದೇ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿಯುತ್ತಿದ್ದೆನೆ.

ಅದೇ ಪಾತ್ರ ಮತ್ತೆ ಸಿಕ್ಕಾಗ ಏನು ಅನಿಸಿತು?

ನಾಯಿಗಳ ದಿನಚರಿ ಅಭ್ಯಸಿಸಿದೆ. ಇಡೀ ನಾಟಕದಲ್ಲಿ ಇರಬೇಕಾದ್ದರಿಂದ ಹೆಚ್ಚಿನ ಸ್ಟ್ಯಾಮಿನಾ ಬೇಕಿತ್ತು. ಅಂಗಸಾಧನೆ  ರೂಢಿಸಿಕೊಂಡೆ. ನಾಯಿಗಳನ್ನು ಅನುಸರಿಸಿ, ಅನುಕರಿಸಿದೆ. ಈ ಪಾತ್ರ ನನಗಿಷ್ಟ. ‘ಅನಿಲ್ ಹುಲಿಯ’ ಎಂದೇ ಹೇಳಿಕೊಳ್ತೇನೆ. ಇಂತಹ ಉತ್ತಮ ಪಾತ್ರ ಕೊಟ್ಟ ನಿರ್ದೇಶಕ ಬಸು ಸಾರ್ ಅವರ ಉಪಕಾರ ಮರೆಯುವಂತೆಯೇ ಇಲ್ಲ.

ಇದಲ್ಲದೇ ಅನಿಲ್ ಇನ್ನೇನಾಗಿದ್ದಾರೆ?

ಕೆ. ನರೇಂದ್ರ ಬಾಬು ನಿರ್ದೇಶನದ ‘ಸಂತೆಯಲ್ಲಿ ನಿಂತ ಕಬೀರ’ ಹಾಗೂ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರಗಳಲ್ಲಿ ನಟಿಸಿದ್ದೇನೆ. ನಾಲ್ಕೈದು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ದುಡಿದಿದ್ದೇನೆ. ಮುಂದೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನ ಪ್ರಿಂಟ್ ವಿಭಾಗದಲ್ಲಿ ಕೆಲಸ ಮಾಡಬೇಕಿದೆ. ಸಿನಿಮಾ ಕ್ಷೇತ್ರದಲ್ಲೇ ಮುಂದುವರೆಯುವ ಹಂಬಲವಿದೆ.

- ಸಂದರ್ಶನ: ಸಂಕೇತ್ ಗುರುದತ್

 

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk