ಇದೇ ತಿಂಗಳು ಹಸೆಮಣೆ ಏರಲಿದ್ದಾರೆ ನಟಿ ಭಾವನಾ

First Published 21, Jan 2018, 3:46 PM IST
Malayalam actress Bhavana  mehandi pictures are out  and she looks absolutely gorgeous
Highlights

ಮಲಯಾಳಂ ನಟಿ ಭಾವನಾ ಇದೇ ತಿಂಗಳ 22 ನೇ ತಾರೀಖು ಹಸೆಮಣೆ ಏರಲಿದ್ದಾರೆ. ಬಹುಕಾಲದ ಗೆಳೆಯ ಪ್ರೊಡ್ಯೂಸರ್ ನವೀನ್ ಅವರನ್ನು ಭಾವನಾ ವರಿಸಲಿದ್ದಾರೆ.

ಬೆಂಗಳೂರು (ಜ.21): ಮಲಯಾಳಂ ನಟಿ ಭಾವನಾ ಇದೇ ತಿಂಗಳ 22 ನೇ ತಾರೀಖು ಹಸೆಮಣೆ ಏರಲಿದ್ದಾರೆ. ಬಹುಕಾಲದ ಗೆಳೆಯ ಪ್ರೊಡ್ಯೂಸರ್ ನವೀನ್ ಅವರನ್ನು ಭಾವನಾ ವರಿಸಲಿದ್ದಾರೆ.

ತ್ರಿಸೂರ್'ನಲ್ಲಿರುವ ಜವಹರ್'ಲಾಲ್ ಕನ್ವೆನ್ಷನ್ ಸೆಂಟರ್'ನಲ್ಲಿ ಮದುವೆ ನಡೆಯಲಿದೆ. ಹತ್ತಿರದ ಕುಟುಂಬದವರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅದೇ ದಿನ ಸಂಜೆ ಅಲ್ಲಿಯೇ ಇರುವ ಲಾಲು ಕನ್ವೆನ್ಷನ್ ಹಾಲ್'ನಲ್ಲಿ ಅದ್ದೂರಿಯಾಗಿ ರೆಸೆಪ್ಷನ್ ಇಟ್ಟುಕೊಂಡಿದ್ದು, ವಿಐಪಿಗಳು, ಸೆಲೆಬ್ರಿಟಿಗಳು, ಸಿನಿಮಾರಂಗದವರು ಭಾಗವಹಿಸಲಿದ್ದಾರೆ. ಕಳೆದ ವರ್ಷವೇ ಆಗಬೇಕಿದ್ದ ಮದುವೆ ಭಾವನಾ ತಂದೆ ಸಾವಿನಿಂದ ವಿಳಂಬವಾಗಿದೆ.

ಭಾವನಾ ಮೆಹಂದಿ ಶಾಸ್ತ್ರದ ವಿಡಿಯೋ ಝಲಕ್ ನೋಡಿ

 

loader