ಅಕ್ಟೋಬರ್'ನಲ್ಲೇ ಇವರಿಬ್ಬರೂ ಮದುವೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿವಾಹದ ದಿನಾಂಕ ಮುಂದಕ್ಕೆ ಹೋಗಿತ್ತು.

ಮಲಯಾಳಿಯ ಪ್ರಖ್ಯಾತ ನಟಿ ಭಾವನ ಅವರು ಕನ್ನಡ ನಿರ್ಮಾಪಕ ನವೀನ್ ಅವರನ್ನು ಕೈಹಿಡಿಯಲಿದ್ದಾರೆ. ಮೂಲಗಳ ಪ್ರಕಾರ ಡಿ.22ರಂದು ತ್ರಿಶೂರಿನಲ್ಲಿ ಕೆಲವೇ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್'ನಲ್ಲೇ ಇವರಿಬ್ಬರೂ ಮದುವೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿವಾಹದ ದಿನಾಂಕ ಮುಂದಕ್ಕೆ ಹೋಗಿತ್ತು. ನಟಿ ಭಾವನ ಮಲಯಾಳಂ, ತಮಿಳು, ತೆಲುಗು ಸಿನಿಮಾ ಜೊತೆ ಕನ್ನಡದ ಜಾಕಿ, ವಿಷ್ಣುವರ್ಧನ, ಚೌಕ, ಮುಕುಂದ ಮುರಾರಿ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ಮಾಪಕ ನವೀನ್ ಕನ್ನಡದ ರೋಮಿಯೋ ಚಿತ್ರ ನಿರ್ಮಿಸಿದ್ದು, ಇದೇ ಸಿನಿಮಾದಲ್ಲಿ ಭಾವನ ಅವರು ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ.