ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಸಿದ್ಧಾರ್ಥ್‌ ಮಲ್ಹೊತ್ರಾ ಬಿ- ಟೌನ್ ನಲ್ಲಿ ಕೇಳಿ ಬರುವ ಮೋಸ್ಟ್ ಫೇಮಸ್ ಜೋಡಿ. ಇವರಿಬ್ಬರ ನಡುವಿನ ಸಂಬಂಧ ಹೊಸದೇನಲ್ಲ. ಏನಿಲ್ಲ.. ಏನಿಲ್ಲ... ನಮ್ಮಿಬ್ಬರ ನಡುವೆ ಏನಿಲ್ಲ ಅನ್ನುತ್ತಲೇ ಒಟ್ಟಿಗೆ ಓಡಾಡುತ್ತಾರೆ. ಸುತ್ತಾಡುತ್ತಾರೆ. ಆಗಾಗ ಒಟ್ಟಿಗೆ ಸೆರೆ ಸಿಕ್ಕುತ್ತಿರುತ್ತಾರೆ. 

ಪ್ರಿಯತಮನ ಸಾವಿನಿಂದ ಚೀರಿತು ಸಂಜಯ್ ದತ್ ಪುತ್ರಿ ಹೃದಯ

ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಲೈಕಾ ಇತ್ತೀಚಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.  ‘ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಸಿಗುವುದು ಬಹಳ ಕಷ್ಟ. ಅರ್ಜುನ್ ನನ್ನ ಮುಖದ ಮೇಲೆ ನಗು ತರಿಸಿದ. ನನ್ನನ್ನು ಅರ್ಥ ಮಾಡಿಕೊಂಡ. ಅವನ ಜೊತೆ ಇದ್ದಾಗ ನಾನು ಖುಷಿಯಾಗಿರುತ್ತೇನೆ. ಹಾಗಾಗಿ ಅವನೇ ನನಗೆ ಸರಿಯಾದ ಜೋಡಿ’ ಅನಿಸ್ತು ಎಂದು ಹೇಳಿದ್ದಾರೆ. 

ಮಲೈಕಾ- ಅರ್ಜುನ್ ಒಟ್ಟಿಗಿರುವ ಫೋಟೋವನ್ನು ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಹಾಕುತ್ತಿರುತ್ತಾರೆ. ಅವರಿಬ್ಬರ ನಡುವಿನ ವಯಸ್ಸಿನ ಅಂತರದಿಂದ ಟ್ರೋಲ್ ಆಗುತ್ತಿರುತ್ತಾರೆ. 

ಕರುಳು ಸಮಸ್ಯೆ: ಸಹಾಯಕ್ಕೆ ಕಿಚ್ಚನ ಅಂಗಲಾಚಿದ ಫ್ಯಾನ್

‘ ಸಂಬಂಧದಲ್ಲಿ ವಯಸ್ಸಿನ ಅಂತರ ವಿಚಾರವೇ ಅಲ್ಲ. ಇದು ಇಬ್ಬರ ಮನಸ್ಸು ಹಾಗೂ ಹೃದಯಕ್ಕೆ ಸಂಬಂಧಿಸಿದ್ದು.  ವಯಸ್ಸಾದ ಗಂಡಸು ಚಿಕ್ಕ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್ ಮಾಡಬಹುದು. ಅದೇ ವಯಸ್ಸಾದ ಮಹಿಳೆ ಚಿಕ್ಕ ವಯಸ್ಸಿನ ಹುಡುಗನ ಜೊತೆ ರೊಮ್ಯಾನ್ಸ್ ಮಾಡಿದ್ರೆ ಅದನ್ನು ಸಮಾಜ ಒಪ್ಪುವುದಿಲ್ಲ. ಇದು ದುರಂತ’ ಎಂದು ಮಲೈಕಾ ಹೇಳಿದ್ದಾರೆ.