ಫ್ಯಾಷನ್ ಪ್ರಿಯೆ ಮಲೈಕಾ ಹೊಸ ಲುಕ್’ಗೆ ಅಭಿಮಾನಿಗಳು ಫುಲ್ ಫಿದಾ!

First Published 27, Feb 2018, 3:09 PM IST
Malaika Arora New Dress
Highlights

ಮಲೈಕಾ ಅರೋರ ಮೊದಲಿನಿಂದಲೂ ಫ್ಯಾಷನ್ ಪ್ರಿಯೆ. ಸದಾ ಕಾಲ ಭಿನ್ನ ರೀತಿಯ ಉಡುಪು ತೊಡುತ್ತಲೇ ಸುದ್ದಿಯಾಗುವ ಮಲೈಕಾ ಈಗ ಅದೇ ಕಾರಣಕ್ಕೆ ಫ್ಯಾಷನ್  ಪ್ರಿಯರ ಫೇವರಿಟ್ ಆಗಿಬಿಟ್ಟಿದ್ದಾಳೆ.

ಬೆಂಗಳೂರು (ಫೆ. 27): ಮಲೈಕಾ ಅರೋರ ಮೊದಲಿನಿಂದಲೂ ಫ್ಯಾಷನ್ ಪ್ರಿಯೆ. ಸದಾ ಕಾಲ ಭಿನ್ನ ರೀತಿಯ ಉಡುಪು ತೊಡುತ್ತಲೇ ಸುದ್ದಿಯಾಗುವ ಮಲೈಕಾ ಈಗ ಅದೇ ಕಾರಣಕ್ಕೆ ಫ್ಯಾಷನ್  ಪ್ರಿಯರ ಫೇವರಿಟ್ ಆಗಿಬಿಟ್ಟಿದ್ದಾಳೆ.

ಫಾರ್ಮಲ್ ಕಂ ಫ್ಯಾಷನ್ ಉಡುಗೆ ಈ ಬಾರಿ ಮಲೈಕಾಳ ಪ್ರಯೋಗ. ಆಫೀಸ್  ವೇರ್ ಶೈಲಿಯ ಪ್ಯಾಂಟ್ ತುದಿಯನ್ನು ಭಿನ್ನ ಶೈಲಿಯಲ್ಲಿ ಆಕರ್ಷಕವಾಗಿ ಮಡಚಿ, ನಡು ಮಧ್ಯದಲ್ಲಿ ಸುಂದರವಾದ ಪಟ್ಟಿಗಳನ್ನು ಸೇರಿಸುವ ಮೂಲಕ ಉಡುಪಿನ
ಆಕರ್ಷಣೆ ಹೆಚ್ಚಿಸಿಕೊಂಡಿದ್ದಾರೆ.  ಇದಕ್ಕೆ ಒಪ್ಪುವ ಬೆಳ್ಳಿ ಕೋಟ್ ಹೊಂದಿರುವ ಶೂ ಬೇರೆ ಸೇರಿ ಆಕರ್ಷಣೆಗೆ ಮತ್ತಷ್ಟು ವೇಗ  ಸಿಕ್ಕಿಬಿಟ್ಟಿದೆ.  ಇದಿಷ್ಟೇ ಆಗಿದ್ದರೆ ಇದು ಫ್ಯಾಷನ್  ಲೋಕದ ಕತೆ ಎಂದುಕೊಂಡು ಮುಂದೆ  ಸಾಗಬಹುದಾಗಿತ್ತು. ಆದರೆ ಅಸಲಿ ಸಮಾಚಾರ ಇರುವುದು ಮಲೈಕಾ  ಸೌಂದರ್ಯದಲ್ಲಿ. ಈಗ ಹೊಸ ಬಗೆಯ  ಫ್ಯಾಷನ್‌ಗಿಳಿದಿರುವ ಬೆಡಗಿ ಆ ದಿರಿಸಿನಲ್ಲಿ  ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವುದರ  ಮೂಲಕ ಸೋಷಲ್ ಮೀಡಿಯಾಗಳಲ್ಲಿ  ಬಾರೀ ಪ್ರಮಾಣದಲ್ಲಿ ಹಿಟ್ಸ್  ಪಡೆದುಕೊಂಡುಬಿಟ್ಟಿದ್ದಾಳೆ.

ಆಫೀಸ್ ವೇರ್, ಫ್ಯಾಷನ್, ಸ್ಪೋರ್ಟ್ಸ್'ವೇರ್ ಹೀಗೆ ಮೂರು ರೀತಿಗಳ ಮಿಶ್ರಣ  ಮಾಡಿರುವ ಡ್ರೆಸ್‌ನಲ್ಲಿ ಕಪ್ಪು ಕನ್ನಡಕ, ಅರೆ  ನಗ್ನ ಚಿತ್ರ, ತುಟಿಯಮೇಲೊಂದು ತುಂಟ ನಗೆ ಇವೆಲ್ಲವೂ ಸೇರಿಕೊಂಡು ಮಲೈಕಾಳನ್ನು  ತಾಜಾ ಮಲ್ಲಿಗೆಯಾಗಿಸಿವೆ. ಸೋಷಲ್  ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಕೆಲವೇ ಸಮಯದಲ್ಲಿ ಎಲ್ಲ ಕಡೆ ವೈರಲ್ ಆಗಿ ಮಲೈಕಾ ಅಭಿಮಾನಿಗಳು ಫುಲ್  ಜೈಕಾರ ಹಾಕಿದ್ದಾರೆ.  

loader