ಮಜಾ...ಮಜಾ! ಅಂತ ಹೇಳುತ್ತಾ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಧ್ವನಿಯಾಗಿರುವ ರೇಖಾ ಮೋಹನ್ ಸಂದರ್ಭಕ್ಕೆ ತಕ್ಕಂತೆ ಹಾಡೇಳಿ ಅಭಿಮಾನಿಗಳೊಡನೆ ರೆಮೋ ಅಂತಲೇ ಖ್ಯಾತರಾಗಿದ್ದಾರೆ. ಇನ್ನು ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಟೈಮಿಂಗ್ ಮೆಂಟೆನ್ ಮಾಡಿ ಪಂಚಿಂಗ್ ಡೈಲಾಗ್‌ ಕೊಡುವ ನಯನಾ ಸಿಕ್ಕಾಪಟ್ಟೆ ಫೇಮಸ್.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

ಇವರಿಬ್ಬರೂ ಜೋಡಿಯಾಗಿ ಡೈರೆಕ್ಟರ್ ಪ್ರೇಮ್ ನಿರ್ದೇಶನದ 'ವಿಲನ್' ಚಿತ್ರದ 'ಲವ್ ಆಗೋಯ್ತೆ ನಿನ್ನ ಮೇಲೆ' ಹಾಡಿಗೆ ಟಿಕ್ ಟಾಕ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ರೆಮೋ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಟಿಕ್‌ಟಾಕ್‌ ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.