ನಟನೆ, ನಿರೂಪಣೆಯನ್ನು ಸಮಾನವಾಗಿ ಸಂಭಾಳಿಸುತ್ತಾ ಕಿರುತೆರೆ ಬ್ಯೂಟಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ಹಾಗೂ ಪತಿ ಕಿರಣ್ ಅಪಚ್ಚು ಕುಟುಂಬಕ್ಕೆ ಸೆಪ್ಟೆಂಬರ್ 10ರಂದು ವಾರಸುದಾರನ ಎಂಟ್ರಿ ಆಗಿದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘We are 3 now, ತಂದೆ , ತಾಯಿ, ಪ್ಯಾಮಿಲಿ ಹಾಗೂ ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಹೀಗೆ ಇರಲಿ.... ಇಂದು ಕಿರಣ್ ಹಾಗೂ ನನ್ನ ಕುಟುಂಬಕ್ಕೆ ಸಂಭ್ರಮದ ಸುಗ್ಗಿ. ನಮಗೆ ಗಂಡು ಮಗುವಾಗಿದೆ,' ಎಂದು ಮಗನ ಬೆರಳು ಹಿಡಿದಿರುವ ಫೋಟೋ ಅಪ್ಲೋಡ್ ಮಾಡಿ, ಸಂತೋಷ ಹಂಚಿ ಕೊಂಡಿದ್ದಾರೆ.

ಪತಿಯೊಂದಿಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು ಶ್ವೇತಾ. ಸೆಲೆಬ್ರಿಟಿಗಳು ಶ್ವೇತಾಗೆ ಮಾಡಿದ ಸೀಮಂತದ ಫೋಟೋಗಳನ್ನೂ ಶೇರ್ ಮಾಡಿಕೊಂಡು, ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದರು.

‘ಮಜಾ ಟಾಕೀಸ್’ ರಾಣಿ ತಾಯ್ತನಕ್ಕೆ ಬ್ಯಾಡ್ ಕಾಮೆಂಟ್; ಫ್ಯಾನ್ಸ್ ಮೇಲೆ ಗರಂ!

ಕಿರಣ್ ಹಾಗೂ ಶ್ವೇತಾ‌ಗೆ ಸುವರ್ಣನ್ಯೂಸ್.ಕಾಂ ಶುಭ ಹಾರೈಸುತ್ತದೆ.