‘ಮಜಾ ಟಾಕೀಸ್’ ನಲ್ಲಿ ನಗು ನಗುತ್ತಾ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ರಾಣಿ ಶ್ವೇತಾ ಚಂಗಪ್ಪ ತಾಯ್ತನದ ಸಂಭ್ರಮದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮಜಾ ಟಾಕೀಸ್ ರಾಣಿ ಬೇಬಿ ಶವರ್ ಫೋಟೋಸ್!

 

ಪತಿಯೊಂದಿಗೆ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಹಸಿರು ಸೀರೆ ಧರಿಸಿ ಕೊಡವತಿ ಶೈಲಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ‘ಕೊನೆಗೂ ಸೃಜನ್ ಲೋಕೇಶ್ ತಂದೆಯಾಗಿದ್ದೀರಾ ಅಭಿನಂದನೆಗಳು. ಮಜಾ ಟಾಕೀಸ್ ಗೆ ಹೊಸ ಎಂಟ್ರಿ’ ಎಂದು ಕಾಮೆಂಟ್ ಮಾಡಿದ್ದರು.

ಇದನ್ನು ಗಮನಿಸಿದ ಶ್ವೇತಾ ‘ನೀವು ಸೃಜನ್ ಲೋಕೇಶ್ ಗೆ ಯಾಕೆ ಕಂಗ್ರಾಜುಲೇಷನ್ ಹೇಳ್ತಿದ್ದೀರಾ? ಇದು ನನ್ನ ವೈಯಕ್ತಿಕ ಫೋಟೋ. ನಿಮಗೆ ತಮಾಷೆಯಾಗಿ ಕಾಣುತ್ತಿದೆಯಾ? ವೈಯಕ್ತಿಕ ವಿಚಾರ ಹಾಗೂ ವೃತ್ತಿ ಜೀವನದ ಬಗ್ಗೆ ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ನಿಮಗೆ ಇರಬೇಕು. ಸಾರಿ’ ಎಂದು ಶ್ವೇತಾ ಖಡಕ್ ರಿಪ್ಲೈ ಮಾಡಿದ್ದಾರೆ.