ಕೋಟಿಗೊಬ್ಬ-3 ಯಲ್ಲಿ ಕಿಚ್ಚನ ಜೊತೆ ನಟಿಸುವ ನಟಿ ಯಾರು ಗೊತ್ತಾ?

entertainment | Tuesday, June 5th, 2018
Suvarna Web Desk
Highlights

ಕೊನೆಗೂ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈಕೆ ಮಲಯಾಳಿ ಕುಟ್ಟಿ. ಹೆಸರು ಮಡೋನ ಸೆಬಾಸ್ಟಿಯನ್. ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ. ಮಲಯಾಳಂನ ಅತ್ಯಂತ ಜನಪ್ರಿಯ ಚಿತ್ರ ‘ಪ್ರೇಮಂ’ನಲ್ಲಿ ಕಾಣಿಸಿಕೊಂಡ ಹುಡುಗಿ ಈಕೆ. ‘ಪವರ್ ಪಾಂಡಿ’, ‘ಕಿಂಗ್ ಲಯರ್’, ‘ಜುಂಗ’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಈ ನಟಿಯನ್ನು ನಿರ್ಮಾಪಕ ಸೂರಪ್ಪ ಬಾಬು ಈಗ ಕನ್ನಡಕ್ಕೆ ಕರೆತರುತ್ತಿದ್ದಾರೆ.

ಬೆಂಗಳೂರು (ಜೂ. 05): ಕೊನೆಗೂ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈಕೆ ಮಲಯಾಳಿ ಕುಟ್ಟಿ. ಹೆಸರು ಮಡೋನ ಸೆಬಾಸ್ಟಿಯನ್. ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ. ಮಲಯಾಳಂನ ಅತ್ಯಂತ ಜನಪ್ರಿಯ ಚಿತ್ರ ‘ಪ್ರೇಮಂ’ನಲ್ಲಿ ಕಾಣಿಸಿಕೊಂಡ ಹುಡುಗಿ ಈಕೆ. ‘ಪವರ್ ಪಾಂಡಿ’, ‘ಕಿಂಗ್ ಲಯರ್’, ‘ಜುಂಗ’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಈ ನಟಿಯನ್ನು ನಿರ್ಮಾಪಕ ಸೂರಪ್ಪ ಬಾಬು ಈಗ ಕನ್ನಡಕ್ಕೆ ಕರೆತರುತ್ತಿದ್ದಾರೆ.

ಕಾರ್ತಿಕ್ ನಿರ್ದೇಶನದ ಈ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಶುರುವಾಗಿದೆ. ಈ ‘ಪ್ರೇಮಂ’ ನಾಯಕಿ ಕನ್ನಡಕ್ಕೆ ಬರುವುದಕ್ಕೆ ಕಾರಣ ಅಂಬಿ. ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್ ‘ಅಂಬಿ ನಿಂಗ್ ವಯಸ್ಸಾಯ್ತೋ’. ಮೂಲ ಚಿತ್ರದಲ್ಲಿ ಮಡೋನ ಸೆಬಾಸ್ಟಿಯನ್ ಮಾಡಿದ ಪಾತ್ರವನ್ನೇ ಕನ್ನಡ ರಿಮೇಕ್‌ನಲ್ಲಿ ಶ್ರುತಿ ಹರಿಹರನ್ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ಕೂಡ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಮೂಲ ಚಿತ್ರದಲ್ಲಿ ಮಡೋನ ಅವರ ಅಭಿನಯವನ್ನು ನೋಡಿದ ನಿರ್ದೇಶಕ ಕಾರ್ತಿಕ್ ಹಾಗೂ  ಸುದೀಪ್ ‘ಕೋಟಿಗೊಬ್ಬ 3’ ಚಿತ್ರಕ್ಕೆ ಇವರೇ ನಾಯಕಿ ಆಗಲಿ ಎಂದು ನಿರ್ಧರಿಸಿದ್ದಾರೆ.

‘ಕತೆಗೆ ಸೂಕ್ತವಾಗುವಂತಹ ಮುಖ. ಹೋಮ್ಲಿ ಫೇಸ್. ಸುದೀಪ್ ಅವರಿಗೆ  ಒಳ್ಳೆಯ ಜೋಡಿ ಆಗುತ್ತಾರೆ. ಜತೆಗೆ ಪ್ರೇಮಂ ಹಾಗೂ ಪವರ್ ಪಾಂಡಿ ಚಿತ್ರಗಳಲ್ಲಿ  ಈಕೆಯ ನಟನೆ ನೋಡಿದ ಮೇಲೆ ನಮ್ಮ ಚಿತ್ರಕ್ಕೆ ನಾವು ಹುಡುಕುತ್ತಿದ್ದ ಪ್ರತಿಭಾವಂತ ನಟಿ ಈಕೆಯೇ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಕತೆಗೆ ಸೂಕ್ತ ಎಂಬುದನ್ನು  ನಿರ್ದೇಶಕ ಹಾಗೂ ಚಿತ್ರದ ನಾಯಕ ಸುದೀಪ್ ಅವರು ಒಪ್ಪಿಕೊಂಡ ಮೇಲೆಯೇ ಮಡೋನ ಸೆಬಾಸ್ಟಿಯನ್ ಅವರನ್ನು ಕನ್ನಡಕ್ಕೆ ಕರೆತರುತ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.

ಜೂನ್ 10 ರಿಂದ 40 ದಿನಗಳ ಕಾಲ ಸರ್ಬಿಯಾ ದೇಶದಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸುಮಾರು ೫೨ ಮಂದಿ ಪಾಲ್ಗೊಳ್ಳಲಿದ್ದಾರೆ. ಈ ಹಂತದಲ್ಲಿ ನಟ ಸುದೀಪ್ ಜತೆ ಮಡೋನ ಸೆಬಾಸ್ಟಿಯನ್ ಕೂಡ ಪಾಲ್ಗೊಳ್ಳಲಿದ್ದಾರೆ. ಒಟ್ಟು ಎರಡು ಅಥವಾ ಮೂರು ಹಂತಗಳಲ್ಲಿ ‘ಕೋಟಿಗೊಬ್ಬ 3’ ಚಿತ್ರಕ್ಕೆ ಶೂಟಿಂಗ್ ನಡೆಯಲಿ. 

Comments 0
Add Comment

  Related Posts

  Election Bulletin Part 3

  video | Wednesday, April 11th, 2018

  Lingayath Religion Suvarna News Survey Part 3

  video | Wednesday, April 11th, 2018

  Sudeep Shivanna Cricket pratice

  video | Saturday, April 7th, 2018

  Election Bulletin Part 3

  video | Wednesday, April 11th, 2018
  Shrilakshmi Shri