ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಇಬ್ಬರೂ ಮದುವೆಯ ವಸ್ತ್ರದಲ್ಲಿ ದೇವಾಸ್ಥಾನದಿಂದ ಬರುತ್ತಿರುವ ಫೋಟೊವೊಂದು ಮದುವೆ ಸುದ್ದಿಗೆ ಇಂಬು ನೀಡಿದೆ.

ಬೆಂಗಳೂರು(ಅ.26): ಕನ್ನಡ ಸಿನಿಮಾ ರಂಗದ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಹಾಗೂ ನಟಿ ಶುಭಾ ಪೂಂಜಾ ಮದುವೆಯಾಗಿರುವ ಬಗ್ಗೆ ಫೋಟೊವೊಂದು ವೈರಲ್'ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಇಬ್ಬರೂ ಮದುವೆಯ ವಸ್ತ್ರದಲ್ಲಿ ದೇವಾಸ್ಥಾನದಿಂದ ಬರುತ್ತಿರುವ ಫೋಟೊವೊಂದು ಮದುವೆ ಸುದ್ದಿಗೆ ಇಂಬು ನೀಡಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಸ್ವತಃ ನಾಗೇಂದ್ರ ಪ್ರಸಾದ್ ಅವರು ಸ್ವತಃ ಸ್ಪಷ್ಟನೆ ನೀಡಿದ್ದು, ' ಇದು ನನ್ನ ನಿರ್ದೇಶನದ ಸಿನಿಮಾದ ಒಂದು ದೃಶ್ಯ. ಈ ಚಿತ್ರಕ್ಕೆ ಇನ್ನು ಹೆಸರಿಡಲಾಗಿಲ್ಲ. ಸಿನಿಮಾಕ್ಕೆ ನಾನೇ ನಾಯಕ ಶುಭಾ ಪೂಂಜಾ ನಾಯಕಿ. ಚಿತ್ರದ ಒಂದು ದೃಶ್ಯ ವೈರಲ್'ಆಗಿ ಇಷ್ಟೋಂದು ಅವಾಂತರ ಸೃಷ್ಟಿಸಿದೆ. ನಮ್ಮಿಬ್ಬರ ಮದುವೆ ಎಂಬುದು ಬರೀ ಸುಳ್ಳು. ಕೆಲವರು ಪ್ರಚಾರಕ್ಕಾಗಿ ಏನಲ್ಲಾ ಕಥೆಕಟ್ಟುತ್ತಾರೆ ನೋಡಿ' ಎಂದು ನಾಗೇಂದ್ರ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ