15 ದಿನಗಳ ಹಿಂದಷ್ಟೆ ಸಂಗೀತ ಸಂಜೆ ಸಮಾರಂಭದಲ್ಲಿ ಉಗ್ರನೊಬ್ಬ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ 22 ಮಂದಿ ಮೃತಪಟ್ಟಿದ್ದರು. ಈ ಕಠೋರ ದಾಳಿಯನ್ನು ಬ್ರಿಟನ್ ಪ್ರಧಾನಿ ತರೇಸಾ ಮೇ, ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದಾರೆ.
ಲಂಡನ್(ಜೂ.04): ವ್ಯಾನಿನಲ್ಲಿ ಲಂಡನ್ ಸೇತುವೆಯ ಬಳಿ ಬಂದ ಮೂವರು ಶಂಕಿತ ಉಗ್ರರು ಪಾದಚಾರಿಗಳ ಮೇಲೆ ವಾಹನ ಹರಿಸಿ ನಂತರ ಹರಿತವಾದ ಚಾಕುಗಳಿಂದ ಸಿಕ್ಕ ಸಿಕ್ಕ ಸಾರ್ವಜನಿಕರನ್ನು ಇರಿದು ಕೊಂದ ಪರಿಣಾಮ 7 ಮಂದಿ ಸಾರ್ವಜನಿಕರು ಸ್ಥಳದಲ್ಲೇ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶಂಕಿತ ಮೂವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಗಾಯಗೊಂಡ ನಾಗರಿಕರನ್ನು ಸ್ಥಳೀಯ 6 ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ನ್ಯಾನಿನಲ್ಲಿ ಬಂದ ಮೂವರು ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಇರಿಯಲು ಶುರು ಮಾಡಿದರು. ಈ ದೃಶ್ಯ ಕಂಡ ಸ್ಥಳೀಯರು ಕಿರುಚುತ್ತ ಹಾಗೂ ಭಯಭೀತರಾಗಿ ಓಡಲು ಶುರು ಮಾಡಿದರು. ಘಟನೆಯ ನಂತರ ಲಂಡನ್'ನಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
15 ದಿನಗಳ ಹಿಂದಷ್ಟೆ ಸಂಗೀತ ಸಂಜೆ ಸಮಾರಂಭದಲ್ಲಿ ಉಗ್ರನೊಬ್ಬ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ 22 ಮಂದಿ ಮೃತಪಟ್ಟಿದ್ದರು. ಈ ಕಠೋರ ದಾಳಿಯನ್ನು ಬ್ರಿಟನ್ ಪ್ರಧಾನಿ ತರೇಸಾ ಮೇ, ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದಾರೆ.
ರಂಜಾನ್'ನಲ್ಲಿ ದಾಳಿ : ಐಎಸ್ಐಎಸ್ ಬೆದರಿಕೆ
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಮಾಸದ ಸಂದರ್ಭದಲ್ಲಿ ವಾಹನ, ಚಾಕು ಹಾಗೂ ಗನ್'ಗಳ ಮೂಲಕ ದಾಳಿ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿತ್ತು.