ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದೆ ಈ ತಂಡ; ಅರ್ಧ ಶತಕದ ಸಂಭ್ರಮದಲ್ಲಿದೆ ಲೋಲ್'ಬಾಗ್ ಟೀಂ

entertainment | Saturday, February 10th, 2018
Suvarna Web Desk
Highlights

ಬೆಂಗಳೂರಿನಲ್ಲಿ ಲಾಲ್'ಬಾಗ್  ಕೇಳಿದ್ದೇವೆ. ಅದರ ಜೊತೆಗೆ ಇನ್ನೊಂದು ‘ಲೋಲ್' ಬಾಗ್ ’ ಕೂಡ ಇದೆ. ಇದೇನಿದು ಲೋಲ್' ಬಾಗ್  ಎಂದುಕೊಂಡರೆ ಅದಕ್ಕೆ ಉತ್ತರ ಭಾನುವಾರ  ಕೆ. ಎಚ್. ಕಲಾಸೌಧಕ್ಕೆ ​ ಹೋದರೆ ಗೊತ್ತಾಗುತ್ತದೆ. ಅರ್ಧ ಶತಕದ ಸಂಭ್ರಮದಲ್ಲಿ ಲೋಲ್'ಬಾಗ್  ಕನ್ನಡ ಗೊತ್ತಿಲ್ಲ ಡಾಟ್. ಕಾಂ ಮೂಲಕ  ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದ  ಅನೂಪ್ ಮಯ್ಯ ಮತ್ತು ತಂಡದ ಸದಸ್ಯರು ಒಂದು ಸಲ ‘ನಾವು ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಕನ್ನಡ ಗೊತ್ತಿರುವವರಿಗೆ ಏನು ಮಾಡುತ್ತಿದ್ದೇವೆ? ಎಂದು ಯೋಜನೆ ಮಾಡಿ ಕನ್ನಡಿಗರಿಗೂ ಮನರಂಜನೆ  ನೀಡುವ ಕಾರ್ಯಕ್ರಮ ಮಾಡಬೇಕು ಎಂದುಕೊಳ್ಳುವಾಗ ಹುಟ್ಟಿಕೊಂಡದ್ದು  ‘ಸ್ಟಾಂಡರ್ಡ್ ಕಾಮಿಡಿ’ ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ.

ಬೆಂಗಳೂರು (ಫೆ.10): ಬೆಂಗಳೂರಿನಲ್ಲಿ ಲಾಲ್'ಬಾಗ್  ಕೇಳಿದ್ದೇವೆ. ಅದರ ಜೊತೆಗೆ ಇನ್ನೊಂದು ‘ಲೋಲ್' ಬಾಗ್ ’ ಕೂಡ ಇದೆ. ಇದೇನಿದು ಲೋಲ್' ಬಾಗ್  ಎಂದುಕೊಂಡರೆ ಅದಕ್ಕೆ ಉತ್ತರ ಭಾನುವಾರ ಕೆ. ಎಚ್. ಕಲಾಸೌಧಕ್ಕೆ  ಹೋದರೆ ಗೊತ್ತಾಗುತ್ತದೆ. ಅರ್ಧ ಶತಕದ ಸಂಭ್ರಮದಲ್ಲಿ ಲೋಲ್'ಬಾಗ್  ಕನ್ನಡ ಗೊತ್ತಿಲ್ಲ ಡಾಟ್. ಕಾಂ ಮೂಲಕ  ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದ  ಅನೂಪ್ ಮಯ್ಯ ಮತ್ತು ತಂಡದ ಸದಸ್ಯರು ಒಂದು ಸಲ ‘ನಾವು ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಕನ್ನಡ ಗೊತ್ತಿರುವವರಿಗೆ ಏನು ಮಾಡುತ್ತಿದ್ದೇವೆ? ಎಂದು ಯೋಜನೆ ಮಾಡಿ ಕನ್ನಡಿಗರಿಗೂ ಮನರಂಜನೆ  ನೀಡುವ ಕಾರ್ಯಕ್ರಮ ಮಾಡಬೇಕು ಎಂದುಕೊಳ್ಳುವಾಗ ಹುಟ್ಟಿಕೊಂಡದ್ದು  ‘ಸ್ಟಾಂಡರ್ಡ್ ಕಾಮಿಡಿ’ ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ.

ಇಂಗ್ಲೀಷ್, ಹಿಂದಿ, ತಮಿಳುಗಳಲ್ಲಿ ಹೆಚ್ಚಾಗಿರುವ ಈ ಸ್ಟಾಂಡರ್ಡ್ ಕಾಮಿಡಿ ಕಾರ್ಯಕ್ರಮ ಕನ್ನಡಕ್ಕೆ ತೀರಾ ಹೊಸದು. ಹಂಪಾ ಕುಮಾರ್ ಅಂಗಡಿ, ಕಾರ್ತಿಕ್,  ರಾಕೇಶ್  ಮಯ್ಯ, ಸುದರ್ಶನ್,  ರಂಗಪ್ರಸಾದ್, ಪವನ್,  ವೇಣು ಗೋಪಾಲ್, ಸೀಮಾ ರಾವ್, ಅನೂಪ್ ಮಯ್ಯ ಸೇರಿ ಒಂದು ತಂಡವನ್ನು ಕಟ್ಟಿಕೊಂಡು ಕನ್ನಡದ ಗಾದೆಗಳು, ಆಡುನುಡಿಗಳನ್ನು ಪೋಣಿಸಿ ಜನರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಜನ್ಮ  ತಾಳಿದ ಅವರ ಸ್ಟಾಂಡರ್ಡ್ ಕಾಮಿಡಿ ಇಂದು ಐವತ್ತು ಪ್ರ ದರ್ಶನಗಳನ್ನು ಪೂರೈಸುವ ತವಕದಲ್ಲಿದೆ.

ಬೆಂಗಳೂರಿನಾಚೆಗೂ ಮೈಸೂರು, ಮಂಗಳೂರು, ಮಲೆನಾಡು ಪ್ರ ದೇಶಗಳಲ್ಲಿ ಶೋ  ನೀಡಿರುವು ದು ವಿಶೇಷ. ಹೊಸ ಹೊಸ ಚಿಂತನೆಗಳಿಂ ದ ಹುಟ್ಟಿಕೊಂಡಿರುವ ಈ ಕಾರ್ಯಕ್ರಮವನ್ನು ಶಾಲಾ ಕಾಲೇಜು ವಿ ದ್ಯಾರ್ಥಿಗಳು ಮೆಚ್ಚಿಕೊಂಡಿದ್ದಾರೆ. ಕನ್ನಡದ  ದೇಶೀಯತೆಯನ್ನು ಉಳಿಸಬೇಕು. ಶಾಲೆ ಕಾಲೇಜುಗಳಲ್ಲಿ ಲರ್ನ್ ವಿತ್ ಕಾಮಿಡಿ  ಎನ್ನುವ ಹೊಸ ಕಲಿಕಾ ವಿಧಾನವನ್ನು ಪರಿಚಯಿಸಬೇಕು ಎಂದುಕೊಂಡಿದ್ದೇವೆ. ಹಾಗಾಗಿ ತಿಂಗಳಿಗೆ ಒಂದು ಓಪನ್  ಮೈಂಡ್  ಶೋ ಕೂಡ ಮಾಡುತ್ತೇವೆ. ಇದರಲ್ಲಿ ಪ್ರತಿಭೆ ಇರುವ ಆಸಕ್ತರೂ ಕೂಡ ಭಾಗವಹಿಸುವ ಅವಕಾಶವಿದೆ.  ಸಂಜೆ 6 ರಿಂದ 7.30 ರ ವರೆಗೆ  ಬೆಂಗಳೂರಿನ ಕೆ. ಎಚ್. ಕಲಾಸೌಧದಲ್ಲಿ 50 ನೇ ಶೋ ಇರುತ್ತ ದೆ. 300 ಜನಕ್ಕೆ ಅವಕಾಶವಿದ್ದು  ಒಬ್ಬರಿಗೆ 200 ರೂ.  ಟಿಕೇಟು.

 

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk