ಸ್ಯಾಂಡಲ್‌ವುಡ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಮೇಲ್ಚಾವಣಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಹುಟ್ಟುಹಬ್ಬದಷ್ಟೊತ್ತಿಗೆ ಕೆಲಸ ಮುಗಿದಿರುತ್ತದೆ. ಇಲ್ಲಿಯೇ ಹುಟ್ಟುಹಬ್ಬ ಆಚರಿಸಲಾಗುತ್ತದೆ ಎಂದು ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

ಸಿನಿಮಾ ನಿರ್ಮಾಣಕ್ಕಿಳಿದ ವಿಷ್ಣು ಸೇನಾ ಅಧ್ಯಕ್ಷ ಶ್ರೀನಿವಾಸ್!

 

ಈ ಹಿಂದೆ ವಿಷ್ಣುದಾದನ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಬೇಕೆಂದು ಭಾರತಿ ವಿಷ್ಣುವರ್ಧನ್ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ವಿವಾದ ಮಾತ್ರ ಇನ್ನೂ ಬಗೆಹರಿಯುತ್ತಿಲ್ಲ. ಇದೀಗ ಅಭಿಮಾನಿಗಳು ಅಭಿಮಾನ್ ಪುಣ್ಯಭೂಮಿಯಲ್ಲೇ ಹುಟ್ಟುಹಬ್ಬ ಆಚರಿಸಿಬೇಕೆಂದು ನಿರ್ಧಾರ ಮಾಡಿದ್ದಾರೆ.

ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

ವಿಷ್ಣು ಬರ್ತಡೇ ಪ್ರಯುಕ್ತ ಡಾ.ವಿಷ್ಣು ಸೇನಾ ಸಮಿತಿ ಅವರು 'ಡಾ. ವಿಷ್ಣುವರ್ಧನ್ ನಾಟಕೋತ್ಸವ' ಕಾರ್ಯಕ್ರಮವನ್ನು ಸೆಪ್ಟೆಂಬರ್ 18,19 ಮತ್ತು 20 ರಂದು ಹಮ್ಮಿಕೊಂಡಿದ್ದಾರೆ. ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.