ಡಿಸೆಂಬರ್‌ ತಿಂಗಳಲ್ಲಿ ಅವರದೇ ನಿರ್ಮಾಣದ ಚಿತ್ರವೊಂದು ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಶ್ರೀನಿವಾಸ್‌ ಅವರ ಚಿತ್ರ ನಿರ್ಮಾಣದ ಸಾಹಸಕ್ಕೆ ನಟ ಕಿಚ್ಚ ಸುದೀಪ್‌ ಕೂಡ ಸಾಥ್‌ ನೀಡುತ್ತಿದ್ದಾರೆನ್ನುವುದು ಇಲ್ಲಿರುವ ಮತ್ತೊಂದು ವಿಶೇಷ.

ನಟ ವಿಷ್ಣುವರ್ಧನ ನೆನಪಲ್ಲಿ ಕ್ಯಾಲೆಂಡರ್‌

ಸದ್ಯಕ್ಕೆ ಶ್ರೀನಿವಾಸ್‌ ನಿರ್ಮಾಣದ ಚಿತ್ರದ ಹೆಚ್ಚಿನ ವಿವರ ಹೊರಬಿದ್ದಿಲ್ಲ. ಅದರ ನಿರ್ದೇಶಕ, ನಾಯಕ ನಟ ಸೇರಿದಂತೆ ಇತ್ಯಾದಿ ವಿವರವೂ ಗೊತ್ತಾಗಿಲ್ಲ. ಆ ಬಗ್ಗೆ ಕೇಳಿದರೆ, ಅದಿನ್ನು ಫೈನಲ್‌ ಆಗಿಲ್ಲ ಅಂತಾರೆ ವೀರಕಪುತ್ರ ಶ್ರೀನಿವಾಸ್‌. ಆದರೆ ಅವರು ಸ್ಟಾರ್‌ ಜತೆಗೆ ಸಿನಿಮಾ ನಿರ್ಮಾಣ ಮಾಡುವುದು ಖಚಿತ. ಅದು ಕೂಡ ಸುದೀಪ್‌ ಅವರ ಜತೆಗೆಯೇ ಸಿನಿಮಾ ಮಾಡುವ ಸಾಧ್ಯತೆಗಳೇ ಹೆಚ್ಚಿವೆ ಎನ್ನುವುದು ಕೂಡ ಮೂಲಗಳ ಮಾಹಿತಿ. ಆದರೆ ಅದನ್ನು ಶ್ರೀನಿವಾಸ್‌ ಸದ್ಯಕ್ಕೆ ಒಪ್ಪುತ್ತಿಲ್ಲ.

ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

‘ನಾನು ಸಿನಿಮಾ ನಿರ್ಮಾಣ ಮಾಡುತ್ತಿರುವುದು ನಿಜ. ಹಾಗೆಯೇ ನಮ್ಮ ಜತೆಗೆ ನಟ ಕಿಚ್ಚ ಸುದೀಪ್‌ ಅವರು ಕೂಡ ಇರುವುದು ಕೂಡ ಅಷ್ಟೇ ಸತ್ಯ. ಆದರೆ ನಮ್ಮ ನಿರ್ಮಾಣದ ಸಿನಿಮಾ ಹೀರೋ ಯಾರು ಎನ್ನುವುದು ಇನ್ನು ಫೈನಲ್‌ ಆಗಿಲ್ಲ. ಅದಕ್ಕೆ ಇನ್ನು ಒಂದಷ್ಟುಸಮಯವೂ ಇದೆ. ಯಾಕಂದ್ರೆ ನಮ್ಮ ಆಲೋಚನೆ ಇರುವುದು ಡಿಸೆಂಬರ್‌ ತಿಂಗಳಿಗೆ. ಆಗಲೇ ಎಲ್ಲವೂ ಫೈನಲ್‌ ಆಗಲಿವೆ’ ಎನ್ನುತ್ತಾರೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌.