* ಜಯಸೂರ್ಯ ಚಿತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದು ಸಿಎಂ ಪಾತ್ರ* ನವೆಂಬರ್ 10ಕ್ಕೆ ಜಯಸೂರ್ಯ ಸಿನಿಮಾ ಬಿಡುಗಡೆ* ಸಂತೋಷ್ ಶ್ರೀರಾಮುಡು ನಿರ್ಮಾಣದ ಸಿನಿಮಾ

ಬೆಂಗಳೂರು(ಅ. 26): ಕೆಪಿಸಿಸಿ ಮಹಿಳಾ ಘಟಕದ ರಾಜಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಪ್ರಯತ್ನದಲ್ಲಿಯೇ ಸಿಎಂ ಆಗಿದ್ದಾರೆ. ಏನಪ್ಪ ಇದು ಇನ್ನೂ ಎಲೆಕ್ಷನ್ನೇ ಬಂದಿಲ್ಲ. ಆಗಲೇ ಸಿಎಂ ಅಂತ ಕೇಳಬೇಡಿ. ಇದು ಸಿನಿಮಾ ವಿಚಾರ. ದೇಶ ಪ್ರೇಮ ಸಾರುವ, ಪ್ರೀತಿಯನ್ನೂ ಹೇಳೋ ಚಿತ್ರವೊಂದು ಈಗ ಸಿದ್ಧಗೊಂಡಿದೆ. "ಜಯಸೂರ್ಯ" ಹೆಸರಿನ ಹೊಸಬರ ಈ ಚಿತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯಮಂತ್ರಿ ಪಾತ್ರವನ್ನ ನಿರ್ವಹಿಸಿದ್ದಾರೆ. ಉತ್ತರ ಕನಾರ್ಟಕದ ಸೊಡಗಿನ ಈ ಚಿತ್ರಕ್ಕೆ, ನಾಯಕ-ನಿರ್ದೇಶಕ, ಗೀತರಚನಾಕಾರ, ನಿರ್ಮಾಪಕ ಎಲ್ಲವೂ ಸಂತೋಷ್ ಎಚ್.ಶ್ರೀರಾಮುಡು. ಬೆಳಗಾವಿ ಹುಡುಗಿ ಅಂಜಲಿ ಅವರು ಸಂತೋಷ್'ಗೆ ಜೋಡಿಯಾಗಿದ್ದಾರೆ. ಬರುವ ನವೆಂಬರ್ 10 ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಈಗ ಚಿತ್ರದ ಟ್ರೇಲರ್ ಮತ್ತು ಹಾಡುಗಳೂ ಕೂಡ ರಿಲೀಸ್ ಆಗಿವೆ.