ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು ಶಿವರಾಜ್ ಕುಮಾರ್ ಜೊತೆ ಫಿಲ್ಮ್‌ ಮಾಡುತ್ತಿಲ್ಲ ಅಂತ ಗೊತ್ತಾಗಿದೆ. ಇದರಿಂದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ವಾಪಸ್ ನೀಡಿದ್ದರು ಸೂರಪ್ಪ ಬಾಬು ಎನ್ನಲಾಗಿದ್ದು, ಉಳಿದ ಹಣ ಕೇಳಿದಾಗ ಬೆದರಿಕೆ..

ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ 'ವಂಚನೆ ಕೇಸ್' ಅಡಿಯಲ್ಲಿ ಮಹಿಳೆಯೊಬ್ಬರಿಂದ ವಂಚನೆ ಆರೋಪದ ಮೇಲೆ FIR ದಾಖಲಾಗಿದೆ.

ಮಹಿಳೆ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆಯಲ್ಲಿ FIR ದಾಖಲಾಗಿದ್ದು, ಮುಂದಿನ ತನಿಖೆ ಚುರುಕುಗೊಂಡಿದೆ. 2023ರಲ್ಲಿ ಮಹಿಳೆಗೆ ಪರಿಚಯವಾಗಿದ್ದ ಸೂರಪ್ಪ ಬಾಬು 'ನಟ ಶಿವರಾಜ್ ಕುಮಾರ್,ನಟ ಗಣೇಶ್ ಜೊತೆ ಫಿಲ್ಮ್ ಮಾಡ್ತಿದ್ದೀನಿ, ಚಿತ್ರ ನಿರ್ಮಾಣಕ್ಕೆ ಸಾಲ‌ ಬೇಕೆಂದು ಸೂರಪ್ಪ‌ಬಾಬು ಕೇಳಿದ್ದರು ಎನ್ನಲಾಗಿದೆ. ಹೀಗಾಗಿ ಹಂತಹಂತವಾಗಿ 92 ಲಕ್ಷ ರೂ.ಗಳನ್ನು ಆ ಮಹಿಳೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು ಶಿವರಾಜ್ ಕುಮಾರ್ ಜೊತೆ ಫಿಲ್ಮ್‌ ಮಾಡುತ್ತಿಲ್ಲ ಅಂತ ಗೊತ್ತಾಗಿದೆ. ಇದರಿಂದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ವಾಪಸ್ ನೀಡಿದ್ದರು ಸೂರಪ್ಪ ಬಾಬು ಎನ್ನಲಾಗಿದ್ದು, ಉಳಿದ ಹಣ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಮಹೀಲೆ ಆರೋಪ ಮಾಡಿದ್ದಾರೆ. ಹೀಗಾಗಿ ಸೂರಪ್ಪ ಬಾಬು ವಿರುದ್ಧ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ FIR ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ದೂರುದಾರೆ ಲಕ್ಷ್ಮೀ ಹೇಳಿಕೆ ಹೀಗಿದೆ.. 'ಸೂರಪ್ಪ ಬಾಬು ನಮ್ ಯಜಮಾನ್ರ ಮೂಲಕ ನನಗೆ ಪರಿಚಯ ಆಗಿದ್ದು.. 2023 ನವೆಂಬರ್ ಲ್ಲಿ 25 ಲಕ್ಷ ಆರ್ ಟಿ ಜಿ ಎಸ್ ಮಾಡಿದ್ವಿ… ಮತ್ತೇ 25 ಲಕ್ಷ ಹಣ ಪೇ ಮಾಡಿದ್ವಿ… ಫೆಬ್ರವರಿಯಲ್ಲಿ ಮತ್ತೇ 5 ಲಕ್ಷ ಕ್ಯಾಶ್ ಪಡ್ಕೊಂಡಿದ್ರು… ಹೀಗೆ ಹಂತ ಹಂತವಾಗಿ ಲಕ್ಷಾಂತರ ಹಣ ಪೇ ಮಾಡಿದ್ವಿ… ಮೂವಿ ಸ್ಟಾರ್ಟ್ ಮಾಡೋದು ಸ್ಟಾಪ್ ಮಾಡಿದ್ರು.. ಮತ್ತೇ ಬೇರೆ ಮೂವಿ ಮಾಡ್ತಿದ್ದಾರೆ ಅಂಥ ಗೊತ್ತಾಯಿತು…

ನಾವು ದುಡ್ಡು ವಾಪಸ್ ಕೇಳಿದಾಗ ಮೊದಲು 25 ಲಕ್ಷ ಪೇ ಮಾಡಿದ್ರು… ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿದ್ರು ಕೈಗೇ ಸಿಗ್ತಿರ್ಲಿಲ್ಲ… ಶಿವಣ್ಣ, ಗಣೇಶ್ ಆಕ್ಟ್ ಮಾಡ್ತಿದ್ದಾರೆ ಅಂಥ ಹೇಳಿದ್ರು… ಒಟ್ಟು 92 ಲಕ್ಷದ 50 ಸಾವಿರ ಹಣವನ್ನ ನಾವು ಕೊಟ್ಟಿದ್ವಿ… ಇನ್ನೂ 52 ಲಕ್ಷ ಹಣ ಬರೋದು ಬಾಕಿ ಇದೆ… ವಾಯ್ಸ್ ಮೆಸೇಜ್, ಮೆಸೇಜ್ ಅಷ್ಟೇ ಹಾಕ್ತಿದ್ರು… ಫೋನ್ ಗೆ ಮಾತಾಡೋಕೆ ಸಿಗ್ತಿರ್ಲಿಲ್ಲ… ಅವ್ರು ಮಾತಾಡೋಕೆ ಸಿಗದೇ ಇರೋದ್ರಂದ ಈಗ ಬೇರೆ ದಾರಿ ಕಾಣದೇ ಫಿಲಂ ಚೇಂಬರ್ಸ್ ಗೆ ಕಂಪ್ಲೇಂಟ್ ಕೊಡ್ತೀವಿ…' ಎಂದಿದ್ದಾರೆ ದೂರುದಾರ ಮಹಿಳೆ.