Asianet Suvarna News Asianet Suvarna News

‘ಕಿರಿಕ್ ಪಾರ್ಟಿ'ಯ ಕಾರಿನ ಹಣ ಸಮಾಜ ಸೇವೆಗೆ: ಮಾದರಿಯಾದ ರಕ್ಷಿತ್ ಶೆಟ್ಟಿ

ಕಾರು ಹರಾಜಿನಲ್ಲಿ ಬಂದ  3.15  ಲಕ್ಷ ರೂ.ವನ್ನು ವೇಶ್ಯೆಯರ ಪುನರ್ವಸತಿಯಾಗಿ ದುಡಿಯುತ್ತಿ ರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ. ಕಳೆದ ವಾರವಷ್ಟೇ ಕಾರನ್ನು ಹರಾಜು ಹಾಕಲಾಗಿತ್ತು. ಬೆಳಗಾವಿ ಮೂಲದ ರವಿಕೋರೆ ಎಂಬುವರು ಹರಾಜಿನಲ್ಲಿ ಕಾರನ್ನು ತಮ್ಮದಾಗಿಸಿ ಕೊಂಡಿದ್ದರು. ಇದರಿಂದ ಬಂದ ಹಣವನ್ನು ಈಗ ರಕ್ಷಿತ್ಶೆಟ್ಟಿ, ಸೇವಾ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ.

Kirik Party Movie Car sale
  • Facebook
  • Twitter
  • Whatsapp

ಬೆಂಗಳೂರು(ಜೂ.03): ಚಿತ್ರದಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಆದರ್ಶ ಮೆರೆದಿರುವ ನಟ ರಕ್ಷಿತ್‌ಶೆಟ್ಟಿ, ‘ಕಿರಿಕ್‌ ಪಾರ್ಟಿ' ಚಲನಚಿತ್ರದಲ್ಲಿ ಪ್ರೇಕ್ಷಕರ ಗಮನಸೆಳೆದಿದ್ದ ಕಾರನ್ನು ಹರಾಜು ಹಾಕಿದ್ದು, ಅದರಿಂದ ಬಂದ ಹಣವನ್ನು ಸೇವಾ ಸಂಸ್ಥೆಯೊಂದಕ್ಕೆ ದಾನ ಮಾಡಲು ಮುಂದಾಗಿದ್ದಾರೆ.
ಕಾರು ಹರಾಜಿನಲ್ಲಿ ಬಂದ  3.15  ಲಕ್ಷ ರೂ.ವನ್ನು ವೇಶ್ಯೆಯರ ಪುನರ್ವಸತಿಯಾಗಿ ದುಡಿಯುತ್ತಿ ರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ. ಕಳೆದ ವಾರವಷ್ಟೇ ಕಾರನ್ನು ಹರಾಜು ಹಾಕಲಾಗಿತ್ತು. ಬೆಳಗಾವಿ ಮೂಲದ ರವಿಕೋರೆ ಎಂಬುವರು ಹರಾಜಿನಲ್ಲಿ ಕಾರನ್ನು ತಮ್ಮದಾಗಿಸಿ ಕೊಂಡಿದ್ದರು. ಇದರಿಂದ ಬಂದ ಹಣವನ್ನು ಈಗ ರಕ್ಷಿತ್‌ಶೆಟ್ಟಿ, ಸೇವಾ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಲಿದ್ದಾರೆ.
ಕಿರಿಕ್‌ ಪಾರ್ಟಿ ಚಿತ್ರಕ್ಕಾಗಿ ಹಳೆ ಕಾಲದ ಕಾಂಟೆಸ್ಸಾ ಕಾರನ್ನು ಖರೀದಿ ಸಿದ್ದ ರಕ್ಷಿತ್‌ಶೆಟ್ಟಿ, ಅದಕ್ಕೆ ಹಳದಿ ಬಣ್ಣ ಬಳಸಿ, ಮಾರ್ಪಾಡು ಮಾಡಿಸಿದ್ದರು. ಚಿತ್ರದಲ್ಲಿಯೂ ಕಾರನ್ನು ಮಾರಾಟ ಮಾಡಿ ವೇಶ್ಯಾ ವಾಟಿಕೆ ಬಿಟ್ಟಮಹಿಳೆಯೊಬ್ಬಳ ಮಗುವಿನ ಜೀವನ ರೂಪಿಸಿಕೊಳ್ಳಲು ನೀಡಿದ್ದರು. ಇದನ್ನೇ ನಿಜ ಜೀವನ ದಲ್ಲೂ ರಕ್ಷಿತ್‌ ಕಾರ್ಯರೂಪಕ್ಕೆ ತಂದಿದ್ದಾರೆ.

Follow Us:
Download App:
  • android
  • ios