ಇದೀಗ ಚಿತ್ರರಂಗದಲ್ಲಿ ಮೋಸ್ಟ್ ವಾಂಟೆಡ್ ನಟಿಯರಲ್ಲಿ ಪ್ರಿಯಾ ವಾರಿಯಲ್ ಕೂಡ ಒಬ್ಬರು. ಒಂದು ಕಡೆ ಬಾಲಿವುಡ್‌ನಲ್ಲಿ 'ಶ್ರೀದೇವಿ ಬಂಗ್ಲೋ' ಚಿತ್ರದ ಶೂಟಿಂಗ್‌ನಲ್ಲಿ ಅವರು ಬ್ಯೂಸಿಯಾಗಿದ್ದಾರೆ. ಈ ಕಣ್ಸನ್ನೆ ಹುಡುಗಿಯ 'ಒರು ಅಡಾರ್ ಲವ್' ಕನ್ನಡಕ್ಕೂ ಡಬ್ಬಿಂಗ್ ಆಗುತ್ತಿರುವುದು ಮತ್ತೊಂದು ವಿಶೇಷ. ಇದಕ್ಕೆ ಸಾಥ್ ನೀಡುತ್ತಿರುವುದು ಇತ್ತೀಚೆಗೆ ಪಂಚ ಭಾಷೆಯಲ್ಲಿ ಬಿಡುಗಡೆಯಾದ ರಾಕಿ ಬಾಯ್ ಇಂಟ್ರಡ್ಯೂಸ್ ಮಾಡಿರುವ ಪ್ರಶಾಂತ್ ನೀಲ್.

ಈ ಚಿತ್ರದ ವಿಂಕ್ ವಿಡಿಯೋ ವಿಶ್ವದಲ್ಲಿಯೇ ಸದ್ದು ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಲವು ದಿನಗಳ ಕಾಲ ಟ್ರೆಂಡ್ ಆಗಿಯೇ ಇತ್ತು. ಕಳೆದ ವರ್ಷ ವ್ಯಾಲಂಟೈನ್ಸ್ ಡೇ ಹೊತ್ತಿಗೆ ಮಲಯಾಳಂ ಚಿತ್ರ ರಿಲೀಸ್ ಆದರೆ, ಈ ವರ್ಷ ಪ್ರೇಮಿಗಳ ದಿನದ ಹೊತ್ತಿಗೆ ಕನ್ನಡದಲ್ಲಿಯೂ ಈ ಚಿತ್ರ ಬಿಡುಗಡೆ ಆಗುತ್ತಿದೆ.

ಹೈಸ್ಕೂಲ್ ವಿದ್ಯಾರ್ಥಿಗಳ ನಡುವೆ ನಡೆಯುವ ಕ್ಯೂಟ್ ಪ್ರೇಮ ಕಥೆ ಇದಾಗಿದ್ದು, ಫೆಬ್ರವರಿ 14ಕ್ಕೆ ಈ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಪ್ರಶಾಂತ್ ನೀಲ್ ಉಪಸ್ಥಿತರಿರುತ್ತಾರೆ.

ಕನ್ನಡದಲ್ಲಿ 'ಕಿರಿಕ್ ಲವ್ ಸ್ಟೋರಿ' ಎಂಬ ಹೆಸರಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. 'ಕಿರಿಕ್ ಪಾರ್ಟಿ' ಮೂಲಕ ಕನ್ನಡಕ್ಕೆ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ಪರಿಚಿತರಾಗಿ, ಹೆಸರು ಮಾಡಿದ್ದಾರೆ. ಇದೀಗ ಕಿರಿಕ್ ಲವ್ ಸ್ಟೋರಿ ಎಂಬ ಹೆಸರಲ್ಲಿಯೇ ಚಿತ್ರ ಬರುತ್ತಿದ್ದು, ಕನ್ನಡ ವೀಕ್ಷಕರ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆಲ್ಲುತ್ತದೆಯೋ ನೋಡಬೇಕು.

ಕಣ್ಸನ್ನೆ ಹುಡುಗಿಗೆ ಕೈ ಕೊಡ್ತಾ ಸೋಷಿಯಲ್ ಮೀಡಿಯಾ ಲಕ್?