ಧ್ರುವ ಬಿಡುಗಡೆ ಮಾಡಿದ ಹಾಡಿಗೆ ಪುನೀತ್ ಫಿದಾ

Kinare audio launch by Druva Sarja
Highlights

ಸೋನು ನಿಗಂ ಹಾಗೂ ಶ್ವೇತಾ ಪ್ರಭು ಈ ಹಾಡಿಗೆ ಧ್ವನಿಯಾಗಿದ್ದಾರೆ. ದೇವರಾಜ್ ಪೂಜಾರಿ ನಿರ್ದೇಶನದ ಚಿತ್ರವಿದು.

ಧ್ರುವ ಸರ್ಜಾ ಇತ್ತೀಚೆಗೆ 'ಕಿನಾರೆ' ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಆ ಹಾಡುಗಳನ್ನು ಸ್ಟಾರ್ ನಟರಿಗೆ ಕೇಳಿಸುವ ಮೂಲಕ ಆಡಿಯೋಗೆ ಹೊಸ ರೀತಿಯಲ್ಲಿ ಪ್ರಚಾರ ಕೊಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪುನೀತ್ ರಾಜ್‌ಕುಮಾರ್ 'ಕಿನಾರೆ' ಚಿತ್ರದ 'ಇರುವೆಯಾ ಇರುವೆಯಾ ಸನಿಹವೇ ನೀನು' ಎಂಬ ಮೆಲೋಡಿ ಹಾಡನ್ನು ಕೇಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರದ ನಾಯಕ ಸತೀಶ್ ರಾಜ್, ನಾಯಕಿ ಗೌತಮಿ ಯಾದನ್ ಡ್ಯುಯೆಟ್ ಹಾಡು ಇದಾಗಿದೆ. 

loader