ಪ್ರಸಿದ್ಧ ಬಾಲಿವುಡ್ ನಟ ಅಜಯ್ ದೇವಗನ್ ಅವರ ಮುಂಬರುವ ಚಿತ್ರದಲ್ಲಿ ಈ ಪೋರಿ ಬಾಲಕಿ ಕಲಾವಿದೆಯಾಗಿ ಅಭಿನಯಿಸಲಿದ್ದಾಳೆ.

ಅಷ್ಟಕ್ಕೂ ಈ ಪುಟಾಣಿ ಬಾಲಿವುಡ್ ಲೆವೆಲ್‌ನಲ್ಲಿ ಗಮನ ಸೆಳೆದದ್ದು ಹೇಗೆ ಅನ್ನುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಪ್ರಮುಖ ಅಗರಬತ್ತಿ ಕಂಪೆನಿಯೊಂದು ಹೆಣ್ಣು ಮಕ್ಕಳ ರಕ್ಷಣೆಗೆ ಸಂಬಂಸಿದರಂತೆ ಅಭಿಯಾನ ಮಾಡಿತ್ತು. ಅದರ ಭಾಗವಾಗಿ ಜಾಹೀರಾತು ವೀಡಿಯೋ ಹರಿಬಿಡಲಾಗಿತ್ತು. ಅದರಲ್ಲಿ ಸೃಷ್ಟಿ ಅಭಿನಯಿಸಿದ್ದಳು. ಆಕೆಯ ಆ್ಯಕ್ಟಿಂಗ್ ಸ್ಕಿಲ್ ಅನ್ನು ಗಮನಿಸಿದ ಬಾಲಿವುಡ್ ನಿರ್ದೇಶಕ ವಿಕಿ ಸಿಡಾನಾ ಈಕೆಯನ್ನು ಮುಂಬೈಗೆ ಕರೆಸಿಕೊಂಡರು. ತಮ್ಮ ಮುಂಬರುವ ಅಜಯ್ ದೇವಗನ್ ಅಭಿನಯದ ಚಿತ್ರದಲ್ಲಿ ಅವಕಾಶವನ್ನೂ ನೀಡಿದರು.

ಈ ಸಿನಿಮಾ 2019ರ ಎಪ್ರಿಲ್‌ನಲ್ಲಿ ಕಾಣಲಿದೆ. ಚಿತ್ರದ ಹೆಸರು ಇನ್ನೂ ಫೈನ ಆಗಿಲ್ಲ. ಬೆಂಗಳೂರಿನ ವಿಬ್ ಗಯಾರ್ ಶಾಲೆಯಲ್ಲಿ 5ನೇ ಕ್ಲಾಸ್ ಓದುತ್ತಿರುವ ಸೃಷ್ಟಿ ಬಹಳ ಕಿರಿಯ ವಯಸ್ಸಿನಲ್ಲೇ ಅಂದರೆ ನಾಲ್ಕರ ಹರೆಯದಲ್ಲೇ ಸ್ಟೇಜ್ ಹತ್ತಿ ಪ್ರದರ್ಶನ ನೀಡಿದ ಧೀರೆ. ದೂರದರ್ಶನ ಹಾಗೂ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾಳೆ.