ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೂ, ದಾಂಪತ್ಯ ಜೀವನದ ಕಲಹಕ್ಕೆ ಪೂರ್ಣ ವಿರಾಮ ಹಾಕಿ, ಮತ್ತೆ ಇವರ ದಾಂಪತ್ಯದಲ್ಲಿ ಚೈತ್ರಕಾಲ ಆರಂಭವಾದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುದೀಪ್ ಪತ್ನಿ ಪ್ರಿಯಾ.
ಬೆಂಗಳೂರು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನಂತರ ದಾಂಪತ್ಯ ಕಲಹಕ್ಕೆ ಪೂರ್ಣ ವಿರಾಮ ಹಾಕಿರುವ ಕಿಚ್ಚ ಸುದೀಪ್, ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದಾರೆ.
ಈ ಸ್ಯಾಂಡಲ್‌ವುಡ್ ನಟನ ಜೀವನದಲ್ಲಿ ಮತ್ತೊಮ್ಮೆ ಚೈತ್ರ ಕಾಲ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಪತ್ನಿ ಮೊದಲ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದು. ಬಾಳ ಸಂಗಾತಿಗೆ ಸುದೀಪ್, ಪ್ರೀತಿಯಿಂದ, ಗೌರವಯುತವಾಗಿ ರಾತ್ರಿ 1.45ರ ಸುಮಾರಿಗೇ ಶುಭಾಶಯ ಕೋರಿದ್ದು, ಬಾಳು ಬೆಳಗಲೆಂದು ಟ್ವೀಟ್‌ನಲ್ಲಿ ಹರಸಿದ್ದಾರೆ.
'ಪ್ರೀತಿಯ ಪತಿಗೆ ಥ್ಯಾಂಕ್ಸ್' ಎಂದು ಆತ್ಮ ಸಂಗಾತಿಯ ಟ್ವೀಟ್‌ಗೆ ಪತ್ನಿ ಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ ತಾನೇ ಮಗಳೊಂದಿಗೆ ಹಿಮಾಲಯ ಪ್ರವಾಸ ಮುಗಿಸಿಕೊಂಡಿರುವ ಪ್ರಿಯಾ, ತಮ್ಮ ಟ್ವೀಟರ್ ಪುಟದಲ್ಲಿ ಈ ಪ್ರವಾಸದ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
'ಜೂ. ಕಿಚ್ಚ ಹುಟ್ಟಲೆಂದು,' ಹರಿಸಿ ಇತ್ತೀಚೆಗೆ ಜಗ್ಗೇಶ್ ಟ್ವೀಟ್ ಮಾಡಿದ್ದು, ಸುದೀಪ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
