ಕನ್ನಡ ಚಿತ್ರೋದ್ಯಮದಲ್ಲಿ 22 ವರ್ಷ ಪೂರೈಸಿದ ಕಿಚ್ಚ ಸುದೀಪ್

First Published 30, Jan 2018, 2:56 PM IST
Kichcha Sudeep completed 22 years of journey in Kannada film industry
Highlights

'ಕಿಚ್ಚ' ಚಿತ್ರದ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನ ಗೆದ್ದ ಸುದೀಪ್ 'ಕಿಚ್ಚ ಸುದೀಪ್' ಎಂದೇ ಖ್ಯಾತರಾದ ನಟ, ಕನ್ನಡ ಚಿತ್ರೋದ್ಯಮದಲ್ಲಿ 22 ವರ್ಷಗಳ ಪ್ರಯಾಣವನ್ನು ಮುಗಿಸಿದ್ದಾರೆ.

'ಕಿಚ್ಚ' ಚಿತ್ರದ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನ ಗೆದ್ದ ಸುದೀಪ್ 'ಕಿಚ್ಚ ಸುದೀಪ್' ಎಂದೇ ಖ್ಯಾತರಾದ ನಟ, ಕನ್ನಡ ಚಿತ್ರೋದ್ಯಮದಲ್ಲಿ 22 ವರ್ಷಗಳ ಪ್ರಯಾಣವನ್ನು ಮುಗಿಸಿದ್ದಾರೆ.

ತಮ್ಮ ಶಾರೀರ, ಆಂಗಿಕ ಭಾಷೆ, ಶರೀರ ಎಲ್ಲವೂ ನಟನಾಗಲು ಪರ್ಫೆಕ್ಟ್ ಇರುವ ಸುದೀಪ್ 'ಬಿಗ್‌ಬಾಸ್'ನಂಥ ರಿಯಾಲಿಟಿ ಶೋ ನಡೆಸಿಯೂ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಅಭಿನಯ ಚಕ್ರವರ್ತಿ' ಎಂದೇ ಖ್ಯಾತರಾದ ಸುದೀಪ್ ತಮ್ಮ ಕನ್ನಡ ಚಿತ್ರರಂಗದ ಪ್ರಯಾಣದ ಬಗ್ಗೆ ಗೂಗಲ್ ಪ್ಲಸ್‌ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಈ ಸುದೀರ್ಘ ಪ್ರಯಾಣದಲ್ಲಿ ಅವರಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ನಟ, ತಮ್ಮ ಕುಟುಂಬದ ಸದಸ್ಯರಿಗೂ ಋಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

1996, ಜನವರಿ 31ರಂದು 'ಕಟ್, ಆ್ಯಕ್ಷನ್'ಗೆ ತಲೆ ಬಾಗಿ, ತಾವು ಆರಂಭಿಸಿದ ಮೊದಲ ಪ್ರಯಾಣದ ಅನುಭವವನ್ನು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಶೂಟ್‌ನಲ್ಲಿ ಅಣ್ಣನ ಪಾತ್ರಧಾರಿ 'ಅಂಬರೀಷ್ ಮಾಮ'ನಿಂದ ಆಶೀರ್ವಾದ ಪಡೆಯುವ ದೃಶ್ಯವನ್ನು ಚಿತ್ರೀಕರಿಸಿಕೊಂಡ ಬಗ್ಗೆ ಹೇಳಿರುವ ಸುದೀಪ್, ಅಲ್ಲಿಂದ ಇಲ್ಲೀವರೆಗೂ ಸಾಗಿದ ಪ್ರಯಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
 

loader