Asianet Suvarna News Asianet Suvarna News

ಸೋದರಳಿಯನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಕಿಚ್ಚ ಸುದೀಪ್: ಸೆಟ್ಟೇರಿತು ಸಂಚಿತ್ ನಟನೆಯ 'ಜಿಮ್ಮಿ'

ಸಂಚಿತ್ ಅವರ ಚೊಚ್ಚಲ ಸಿನಿಮಾದ ಮುಹೂರ್ತ ಜೂನ್ 15ರಂದು ಬೆಂಗಳೂರಿನ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಅಕ್ಕನ ಮಗನ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಸುದೀಪ್ ವಿಶ್ ಮಾಡಿದ್ದಾರೆ. 

Kichcha Sudeep Claps To Sanchit Sanjeev New Movie Jimmy gvd
Author
First Published Jun 16, 2023, 12:30 AM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಟುಂಬದಿಂದ ಮತ್ತೊಬ್ಬ ಯುವನಟನ ಎಂಟ್ರಿಯಾಗುತ್ತಿದೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಂಚಿತ್ ಅವರ ಚೊಚ್ಚಲ ಸಿನಿಮಾದ ಮುಹೂರ್ತ ಜೂನ್ 15ರಂದು ಬೆಂಗಳೂರಿನ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಅಕ್ಕನ ಮಗನ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಸುದೀಪ್ ವಿಶ್ ಮಾಡಿದ್ದಾರೆ. ಕಿಚ್ಚನ ಮಾರ್ಗದರ್ಶನದೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಂಚಿತ್ ಸಂಜೀವ್ ರೆಡಿಯಾಗಿದ್ದಾರೆ. 

ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಫೈನಲಿ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಸಂಚಿತ್ ಕೆಲಸ ಮಾಡಿದ್ದರು. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಸುದೀಪ್ ಸೋದರಳಿಯ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. 

ಕಿಚ್ಚ ಸುದೀಪ್ ಅಕ್ಕನ ಮಗ ಸಿನಿಮಾಗೆ ಎಂಟ್ರಿ: ಸಂಚಿತ್ ಸಂಜೀವ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ!

ಜೂನ್‌ 15ರಂದು ಬೆಂಗಳೂರಿನ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭವು ಸರಳವಾಗಿ ನಡೆದಿದೆ. ಚಿತ್ರಕ್ಕೆ ‘ಜಿಮ್ಮಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದ್ದು, ಸೋದರಳಿಯನ ಮೊದಲ ಹೆಜ್ಜೆಗೆ ಸುದೀಪ್ ಕೂಡ ಸಾಥ್ ನೀಡಿದ್ದಾರೆ. ಇದೊಂದು ಕ್ರೈಂ-ಡ್ರಾಮಾ ಸಿನಿಮಾ ಆಗಿದ್ದು, ತಂದೆ- ಮಗನ ಬಾಂಧವ್ಯ ಸಾರುವ ಕಥೆಯಾಗಿದೆ. ಸುದೀಪ್ ಸಲಹೆಯ ಮೇರೆಗೆ ಮೊದಲ ಚಿತ್ರದಲ್ಲೇ ಸಂಚಿತ್ ನಟನೆಯ ಜೊತೆ ನಿರ್ದೇಶನ ಕೂಡ ಮಾಡ್ತಿದ್ದಾರೆ. ನೆಚ್ಚಿನ ನಟ ಸುದೀಪ್ ಫ್ಯಾಮಿಲಿಯಿಂದ ಸಂಚಿತ್ ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರೋದು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.


'2018' ಮಲಯಾಳಂ ಸಿನಿಮಾಗೆ ಕಿಚ್ಚನ ಮೆಚ್ಚುಗೆ: '2018' ಮಲಯಾಳಂನ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೈಜ ಘಟನೆ ಆಧಾರಿತ ಈ 2018 ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೇ 5ರಂದು ತೆರೆಗೆ ಬಂದಿರುವ ಈ ಸಿನಿಮಾ ಮಲಯಾಳಂ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿ ಬೀಗಿದೆ. 2018 ಇದು ನಿಜವಾದ ಕೇರಳ ಸ್ಟೋರಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ ಇದು 2018ಲ್ಲಿ ಕೇರಳದ ಭೀಕರ ಪ್ರವಾದ ಬಗ್ಗೆ ಇರುವ ಸಿನಿಮಾವಾಗಿದೆ. ಮಲಯಾಳಂನಲ್ಲಿ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಈ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾವನ್ನು ಕನ್ನಡದ ಸ್ಟಾರ್ ಕಿಚ್ಚ ಸುದೀಪ್ ಕೂಡ ಮೆಚ್ಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಕಿಚ್ಚನ ಹೊಸ ಸಿನಿಮಾ ಅನೌನ್ಸ್: ಸುದೀಪ್ 46 ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ಯಾರು?

ಕೇರಳ ಸಿನಿಮಾ ಇತಿಹಾಸದ ಅತಿದೊಡ್ಡ ಬ್ಲಾಕ್‌‌ಬಸ್ಟರ್ ಸಿನಿಮಾ ಎಂದಿರುವ ಕಿಚ್ಚ ಸುದೀಪ್ ಕನ್ನಡಿಗರ ಹೃದಯ ಗೆಲ್ಲುತ್ತಿದೆ ಅಂತ ಹೇಳಿದ್ದಾರೆ. 'ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು' ಎಂದು ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ. ಕಿಚ್ಚನ ಪೋಸ್ಟ್‌ಗೆ ಅಭಿಮಾನಿಗಳು ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.  ಕೇರಳ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿ ‘ನಿಮ್ಮ ಪ್ರೀತಿಗೆ ಧನ್ಯವಾದಗಳು' ಎಂದು ಹೇಳುತ್ತಿದ್ದಾರೆ. 

Follow Us:
Download App:
  • android
  • ios