ಮುಂದಿನ ವರ್ಷ ಹಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಎಲ್ಲಾ ಕಡೆ ಸುದೀಪ್ ಇರುತ್ತಾರೆ. ಹಾಗಾಗಿ ಸುದೀಪ್ ಅಭಿಮಾನಿಗಳಿಗೆ 2019 ರಲ್ಲಿ ವರ್ಷಪೂರ್ತಿ ಹಬ್ಬ

ಸುದೀಪ್ ಮತ್ತು ಅಮಿತಾಬ್ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ. 2002ರಲ್ಲಿ ಬಿಡುಗಡೆಯಾದ ಬಾಲಿವುಡ್ ಸೂಪರ್ ಹಿಟ್ ಚಿತ್ರ ಆಂಖೇ ಭಾಗ
2ರಲ್ಲಿ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಆಂಖೇ ಚಿತ್ರ ಬ್ಯಾಂಕ್ ದರೋಡೆ ಮಾಡುವ ಕಥೆಯನ್ನು ಹೊಂದಿತ್ತು. ಚಿತ್ರತಂಡದ ಜೊತೆ ಮಾತುಕತೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಚಿತ್ರತಂಡದಿಂದ ಸಿಗಲಿದೆ. ಈ ಹಿಂದೆ ಸುದೀಪ್ ‘ರಣ’ ಚಿತ್ರದಲ್ಲಿ ಅಮಿತಾಬ್ ಜೊತೆ ನಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಎಂದರೆ ಬಹುಷಃ ಜನವರಿಯಲ್ಲಿ ಸುದೀಪ್ ಅವರು ಸಲ್ಮಾನ್‌ಖಾನ್ ಅಭಿನಯದ ದಬಾಂಗ್ 3 ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ದಬಾಂಗ್ 3 ಚಿತ್ರದಲ್ಲಿ ಸುದೀಪ್ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನವೆಂಬರ್‌ನಲ್ಲಿ ಎಡ್ಡೀ ಆರ್ಯ ನಿರ್ದೇಶನದ ಹಾಲಿವುಡ್ ಚಿತ್ರ ದಿ ರೈಸನ್ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.