ಕಿಚ್ಚ ಸುದೀಪ್ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’ ಚಿತ್ರ ರಿಲೀಸ್ ಗೊಂದಲ ಬಗೆಹರಿಯುವ ಲಕ್ಷಣವೇ ಕಾಣಿಸುತ್ತಿಲ್ಲ. ಆಗಸ್ಟ್ 8 ಕ್ಕೆ ರಿಲೀಸ್ ಆಗುವುದೆಂದು ತಿಳಿಸಲಾಗಿತ್ತು. ಈಗ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.  

ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವುದರ ಬಗ್ಗೆ ನಿರ್ದೇಶಕ ಕೃಷ್ಣ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. 

 

ಪ್ಯಾನ್ ಇಂಡಿಯಾ ರಿಲೀಸ್ ಇರುವ ಕಾರಣ ಸಿನಿಮಾ ಡೇಟ್ ಮುಂದಕ್ಕೆ ಹೋಗಿದೆ. ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಫಂಕ್ಷನ್ ಕೂಡಾ ಮುಂದಕ್ಕೆ ಹೋಗಿದೆ. ಇಂದು ಸಂಜೆ 6.30 ಕ್ಕೆ ರಿಲೀಸ್ ದಿನಾಂಕ ಪ್ರಕಟಪಡಿಸುವುದಾಗಿ ಹೇಳಿದ್ದಾರೆ.