Pailwan  

(Search results - 71)
 • Sudeep Pailwan
  Video Icon

  Small Screen26, Jan 2020, 11:54 AM IST

  ಇದು ಹವಾ ಅಂದ್ರೆ! ಕಿರುತೆರೆಯಲ್ಲಿಯೂ ದಾಖಲೆ ಬರೆದ ಕಿಚ್ಚ ಸುದೀಪ್..!

  ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್ ಮಾತ್ರವಲ್ಲ, ಕಿರುತೆರೆ, ಕಾಲಿವುಡ್, ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕಲಾವಿದ. ಸದ್ಯ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಪೈಲ್ವಾನ್' ಚಿತ್ರ ಕಿರುತೆರೆಯಲ್ಲಿ ದಾಖಲೆಯನ್ನೇ ಬರೆದಿದೆ. ಏನದು? ಇಲ್ಲಿದೆ ನೋಡಿ..! 

 • Appanna
  Video Icon

  Sandalwood12, Oct 2019, 3:43 PM IST

  ಪೈಲ್ವಾನ್ ಪಾಪಣ್ಣನ ಕಿಕ್ ಗೆ ಕಿಚ್ಚ ಬೋಲ್ಡ್ !

  ಕನ್ನಡದ ಅಭಿನಯ ಚಕ್ರವರ್ತಿ ಈಗ ಬೆಳ್ಳಿ ಪರದೆಗೆ ಒಬ್ಬ ಕಾಮಿಡಿಯನ್ ನನ್ನು ಪರಿಚಯಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಆ ನಗೆಗಾರ ಹೊಸ ಮೋಡಿ ಮಾಡಿದ್ದಾರೆ. ಬಾಡಿ ಲ್ಯಾಂಗ್ಜೇಜ್ ವೆರಿ ವೇರಿ ಡಿಫರಂಟ್ ಆಗಿದೆ. ಮಾತಿನ ಶೈಲಿನೂ ಕಾಮಿಡಿ ಟಾನಿಕ್ ಉಣಿಸುತ್ತದೆ.ವಿಶೇಷ ಅಂದ್ರೆ, ಈ ಕಿಲಾಡಿ ಕಲಾಕಾರ್ ಕಾಮಿಡಿಗೆ, ಕಿಚ್ಚ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. ಅದನ್ನ ಆ ಕಿಲಾಡಿ ನಮ್ಮೊಟ್ಟಿಗೆ Exclusive ಆಗಿಯೇ ಹಂಚಿಕೊಂಡಿದ್ದಾರೆ.  ಕಿಚ್ಚನ ಪೈಲ್ವಾನ್ ಚಿತ್ರದಲ್ಲಿ ಎಲ್ಲವೂ ಇದೆ. ನಗೋರಿಗೆ ನಗಿಸೋ ನಯಾ ಜಾದುಗಾರ್ ಈ ಚಿತ್ರದಲ್ಲಿದ್ದಾನೆ. ಈತನ ಮಾತೇ ಚೆಂದ. ಉತ್ತರ ಕರ್ನಾಟಕದ ಸೊಗಡಗು ಬೇರೆ. ಮಾತಲ್ಲಿಯೇ ಕಾಮಿಡಿ ಟಾನಿಕ್ ಉಣಬಡಿಸೋ ಕಿಲಾಡಿ, ಈ ಕಲಾವಿದ.ನೋಡಿ. 

   

 • Ramakanth Aryan

  ENTERTAINMENT23, Sep 2019, 12:05 PM IST

  ಸುದೀಪ ಏನೋ ಮಾತಾಡ್ತಿದ್ದಾರೆ ಕೇಳಿಸಿಕೊಂಡ್ರಾ? ಬಳೆ, ಸರ, ಕಡಗದಾಚೆ ಓದಿಕೊಳ್ಳಿ

  ಪೈಲ್ವಾನ್ ಸಿನಿಮಾ ಬಜೆಟ್ ಬಗ್ಗೆ 30 ರಿಂದ 40 ಕೋಟಿ ಅಂತ ಅಂದಾಜು. ಕಳೆದ ವಾರವಷ್ಟೇ ಬಿಡುಗಡೆ. ಬಿಡುಗಡೆಯಾದ ಕೆಲವೇ‌ ಗಂಟೆಗಳಲ್ಲಿ ಒಬ್ಬೊಬ್ಬನಿಂದ 4000 , 5000 ಲಿಂಕ್ ಗಳ Share. ಏನಾಗಬೇಡ ನಿರ್ಮಾಪಕನಿಗೆ?

 • sud

  ENTERTAINMENT23, Sep 2019, 11:49 AM IST

  ‘ಬಳೆ’ ರಗಳೆ; ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ ಎಂದ ಸುದೀಪ್

  ಬಹುನಿರೀಕ್ಷಿತ ಕಿಚ್ಚ ಸುದೀಪ್ ‘ಪೈಲ್ವಾನ್’ ಪೈರಸಿ ಮಾಡಿದ ರಾಕೇಶ್ ಬಂಧನದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದವು. ಕಿಚ್ಚ ಸುದೀಪ್- ದರ್ಶನ್ ಅಭಿಮಾನಿಗಳ ನಡುವೆ ವಾಕ್ಸಮರ ತಾರಕ್ಕೇರಿತು.  ಪೈರಸಿ ಬಗ್ಗೆ ಸಿಟ್ಟಿನಲ್ಲಿ ರಿಪ್ಲೈ ಮಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡರು. 

 • Pailwan
  Video Icon

  ENTERTAINMENT23, Sep 2019, 10:22 AM IST

  ಪೈರಸಿ ಕಾಟಕ್ಕೆ ‘ಪೈಲ್ವಾನ್’ 5 ಕೋಟಿ ಲಾಸ್?

  ಕಿಚ್ಚ ಸುದೀಪ್ ‘ಪೈಲ್ವಾನ್’ ಖದರ್ ಜೋರಾಗಿರುವಾಗಲೇ ಪೈರಸಿ ಕಾಟ ಎದುರಾಗಿ ನಷ್ಟ ಕಂಡಿದೆ.   ಪೈಲ್ವಾನ್ ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ. ಅಂದಾಜಿನ ಪ್ರಕಾರ ಪೈರಸಿನಿಂದ 5 ಕೋಟಿ ನಷ್ಟವಾಗಿದೆ. ಯಾರೋ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಚಿತ್ರ ತಂಡ ನಷ್ಟ ಅನುಭವಿಸಿದೆ. ಪೈಲ್ವಾನ್ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? ಇಲ್ಲಿದೆ ನೋಡಿ. 

 • pailwan sudeep kannada movie
  Video Icon

  ENTERTAINMENT21, Sep 2019, 11:37 AM IST

  ನಾನು, ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆಯಲ್ಲ; ಸುದೀಪ್ ಗುಡುಗು

  ಪೆಲ್ವಾನ್ ಪೈರಸಿ ಸ್ಟಾರ್ ವಾರ್ ಗೆ ಕಿಚ್ಚು ಹಚ್ಚಿತ್ತು. ಪೈರಸಿ ಮಾಡಿದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೈರಸಿಗರ ವಿರುದ್ಧ ಸುದೀಪ್ ಕಿಡಿ ಕಾರಿದ್ದಾರೆ. ನಾನು ಹಾಗು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆಯನ್ನಲ್ಲ. ಪೈರಸಿ ಮಾಡಿರುವುದು ನೆಮ್ಮದಿಯಾಗಿರುವುದು ಇನ್ನು ಕೆಲವೇ ದಿನ ಮಾತ್ರ ಎಂದು ಗುಡುಗಿದ್ದಾರೆ. 

 • pailwan sudeep kannada movie
  Video Icon

  ENTERTAINMENT20, Sep 2019, 3:52 PM IST

  ‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ

  ಪೈಲ್ವಾನ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆಯುವ ಮೂಲಕ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿತ್ತು. ಪೈರಸಿ ಮಾಡಿದ ಆರೋಪಿ ರಾಕೇಶ್ ರನ್ನು ಪೊಲಿಸರು ಬಂಧಿಸಿದ್ದಾರೆ. ರಾಕೇಶ್ ನಿಜವಾಗ್ಲೂ ದರ್ಶನ್ ಅಭಿಮಾನಿನಾ? ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಗ್ಗೆ ನಿರ್ಮಾಪಕಿ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. 

 • undefined
  Video Icon

  ENTERTAINMENT19, Sep 2019, 2:06 PM IST

  ‘ಪೈಲ್ವಾನ್’ ನೋಡಿ ಸ್ಟಾರ್ ವಾರ್ ಬಗ್ಗೆ ಮಾತನಾಡಿದ ಶಿವಣ್ಣ

  ಪೈಲ್ವಾನ್ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವಣ್ಣ ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅಭಿಯದ ಬಗ್ಗೆ, ಕೃಷ್ಣ ನಿರ್ದೇಶನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ‘ಪೈಲ್ವಾನ್’ ಪೈರಸಿ ಬಗ್ಗೆ ಕೇಳಿದಾಗ ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಸ್ಡಾರ್ ವಾರ್ ಯಾರಿಗೂ ಒಳ್ಳೆಯದಲ್ಲ. ನಾವೆಲ್ಲಾ ಒಂದೇ ಎಂದಿದ್ದಾರೆ.  ಶಿವಣ್ಣನ ಮಾತುಗಳನ್ನು ಅವರ ಬಾಯಲ್ಲೇ ಕೇಳಿ. 

 • Pailwan

  ENTERTAINMENT19, Sep 2019, 11:29 AM IST

  ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

  ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರೀಕ್ಷೆ ಹುಟ್ಟಿಸಿರುವಂತೆ ರಿಲೀಸ್ ಆದ ಮೇಲೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಥಿಯೇಟರ್ ನಿಂದ ಖುಷಿಯಿಂದ ಹೊರ ಬರುತ್ತಿದ್ದಾನೆ. ಇದು ಸಿನಿಮಾ ಕಂಡಿರುವ ಯಶಸ್ಸು ಅಂತಾನೇ ಹೇಳಿರಬಹುದು.   

 • 16 top10 stories

  NEWS16, Sep 2019, 4:56 PM IST

  HDKಗೆ ಕಂಟಕವಾಗುತ್ತಿದೆ ಟೆಂಡರ್; ಫ್ಯಾನ್ಸ್ ಪ್ರೀತಿಗೆ ಕಿಚ್ಚ ಸರೆಂಡರ್; ಇಲ್ಲಿವೆ ಸೆ.16ರ ಟಾಪ್ 10 ಸುದ್ದಿ!

  ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣಿಸುತ್ತಿದೆ ಅನ್ನೋ ಮಾತಿಗೆ ಇದೀಗ ಮತ್ತೊಂದು ಪುಷ್ಠಿ ಸಿಕ್ಕಿದೆ. ಪ್ರಾದೇಶಿಕ ಪಕ್ಷದಿಂದ ಇದೀಗ ಮತ್ತೊರ್ವ ಮುಖಂಡ ಹೊರಕ್ಕೆ ಕಾಲಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ, ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಹೀಗೆ ಸೆ.16ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • Pailwan
  Video Icon

  ENTERTAINMENT16, Sep 2019, 3:26 PM IST

  ಪೈಲ್ವಾನ್ ಗೆ ಸಖತ್ ರೆಸ್ಪಾನ್ಸ್; ಧನ್ಯವಾದ ಹೇಳಿದ ಸುದೀಪ್

  ಕಿಚ್ಚ ಸುದೀಪ್ ‘ಪೈಲ್ವಾನ್’ ಸಿನಿಮಾಗೆ ಎಲ್ಲಾ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಾ ಇದೆ. ಇದರಿಂದ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಫ್ಯಾನ್ಸ್ ಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ಚಿತ್ರಕ್ಕೆ ಉತ್ತಮ ರಿವ್ಯೂ ಕೊಟ್ಟ ಮಾಧ್ಯಮಗಳಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಧನ್ಯವಾದದ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

 • Priya Radhakrishnan
  Video Icon

  ENTERTAINMENT16, Sep 2019, 10:44 AM IST

  ಮತ್ತೆ ಮದುವೆಯಾಗ್ತಾರಂತೆ ಕಿಚ್ಚ ಸುದೀಪ್ ಪತ್ನಿ!

  ಕಿಚ್ಚ ಸುದೀಪ್ ಪತ್ನಿ, ಪುತ್ರಿ ಜೊತೆ ಪೈಲ್ವಾನ್ ವೀಕ್ಷಿಸಿದ್ದಾರೆ. ಪತಿಯ ಆ್ಯಕ್ಟಿಂಗ್ ನೋಡಿ ಪ್ರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಮದುವೆ ಸೀನನ್ನು ನೋಡಿ ತಾವೂ ಮತ್ತೆ ಮದುವೆಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಯ್ಯೋ, ಪ್ರಿಯಾ ಸುದೀಪ್ ಮತ್ತೊಮ್ಮೆ ಮದುವೆಯಾಗ್ತಾರಂತಾ? ಯಾರನ್ನಾ? ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ. 

 • Sudeep Pailwan
  Video Icon

  ENTERTAINMENT15, Sep 2019, 4:18 PM IST

  ಪೈಲ್ವಾನ್ ಗೂ ತಟ್ಟಿದ ಪೈರಸಿ ಕಂಟಕ; ಕಾನೂನು ತಜ್ಞರ ಮೊರೆ ಹೋದ ಚಿತ್ರತಂಡ!

  ಅತೀ ಕೆಟ್ಟ ಹಂತಕ್ಕೆ ಬಂದು ತಲುಪಿದೆ ಸ್ಯಾಂಡಲ್ ವುಡ್ ಸ್ಟಾರ್ ವಾರ್. ಸ್ಟಾರ್ ನಟರಿಗೆ ತಲೆನೋವು ತಂದಿಟ್ಟಿದೆ ಅಭಿಮಾನಿಗಳ ಎಡವಟ್ಟುಗಳು. ಪೈಲ್ವಾನ್ ಚಿತ್ರವನ್ನು ಆನ್ ಲೈನ್ ನಲ್ಲಿ ಲೀಕ್ ಮಾಡಲಾಗಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿದೆ. ಕಾನೂನು ತಜ್ಞರ ಮೊರೆ ಹೋಗಿದೆ ಚಿತ್ರತಂಡ. ಏನಿದು ಹೊಸ ಕ್ಯಾತೆ? ಈ ವಿಡಿಯೋ ನೋಡಿ. 

 • Sudeep Pailwan
  Video Icon

  ENTERTAINMENT15, Sep 2019, 1:51 PM IST

  ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ ಪೈಲ್ವಾನ್..!

  ಪೈಲ್ವಾನ್ ಸಿನಿಮಾ ಪಂಚ ಬಾಷೆಗಳಲ್ಲಿ ರಿಲೀಸ್ ಆಗಿದೆ. ರಿಲೀಸ್ ಆದ ಒಂದೇ ದಿನಕ್ಕೆ ಕೋಟಿ ಕೋಟಿ ಕಲಕ್ಷನ್ ಆಗಿದೆ. ಫಸ್ಟ್ ಡೇ 18 ಕೋಟಿ, ಎರಡನೇ ದಿನದ ಕಲಕ್ಷನ್ 15 ಕೋಟಿ ಆಗಿದೆ. ಮೊದಲ ದಿನದ ಕಲಕ್ಷನ್ ನೋಡಿ ಚಿತ್ರತಂಡವೇ ಶಾಕ್ ಆಗಿದೆ. 

 • undefined
  Video Icon

  NEWS14, Sep 2019, 5:46 PM IST

  ಅಭಿಮಾನದ ಅತಿರೇಕ; ಕಿಚ್ಚ ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ !

  ಗುರುವಾರ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಕೆಲ ಅಭಿಮಾನಿಗಳು ವಿಚಿತ್ರವಾಗಿ ಶುಭಕೋರಿದ್ದಾರೆ. ಪೈಲ್ವಾನ್ ಕಟೌಟ್ ಗೆ ಕುರಿ ಬಲಿ ಕೊಟ್ಟು ಶುಭಕೋರಿದ್ದಾರೆ. ಕುರಿ ತಲೆ ಕಡಿದು ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ ಅರ್ಪಿಸಿದ ಅಭಿಮಾನಿಗಳ ಕೃತ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಲ್ಲೆಬೋರನಹಟ್ಟಿ ಎಂಬ ಗ್ರಾಮದ ಹೆಸರು ಗೋಚರಿಸ್ತಿದೆ.