ಧೂಳೆಬ್ಬಿಸುತ್ತಿದೆ ಕಿಚ್ಚ ಸುದೀಪ್ ಭಾವಚಿತ್ರ: ನೀವ್ ನೋಡಿಲ್ವಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 1:39 PM IST
Kiccha  Sudeep new Photo viral in Social Media
Highlights

ಬಿಡುಗಡೆಯಾಯ್ತು ಕಿಚ್ಚ ಸುದೀಪ್ ವಿಶೇಷ ಭಾವಚಿತ್ರ! ಇದೇ ಸೆ.2 ಕ್ಕೆ ಕಿಚ್ಚ ಸುದೀಪ್ 45ನೇ ಹುಟ್ಟುಹಬ್ಬ! ಫೇಸ್‌ಬುಕ್‌ ಹಾಗು ಟ್ಟೀಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಭಾವಚಿತ್ರ! ಪತ್ನಿ ಪ್ರಿಯಾ ಸುದೀಪ್ ರಿಂದ ಭಾವಚಿತ್ರ ಬಿಡುಗಡೆ
 

ಬೆಂಗಳೂರು(ಆ.31): ಇದೇ ಸೆ.2(ಭಾನುವಾರ) ಕ್ಕೆ ಕಿಚ್ಚ ಸುದೀಪ್ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ನಟ ಸುದೀಪ್ ಅವರ ವಿಶೇಷವಾದ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ.

ಈಗಾಗಲೇ ಫೇಸ್‌ಬುಕ್‌ ಹಾಗು ಟ್ಟೀಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಸುದೀಪ್ ಈ ಭಾವಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಈ ಭಾವಚಿತ್ರ ಅನಾವರಣಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ ಅವರ ಈ ವಿಶೇಷ ಭಾವಚಿತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಇನ್ನು ಈ ವರ್ಷ ಹಾರ, ಕೇಕ್, ಪೇಟಾ ಇಲ್ಲದೆ ಸರಳವಾಗಿ ಹುಟ್ಟು ಹಬ್ಬ ಆಚರಿಸಲು ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ. ಕೇರಳ ಹಾಗು ಕೊಡಗು ಜಿಲ್ಲೆಯಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ, ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

loader