ಅಭಿನಯ ಚಕ್ರವರ್ತಿ ಸುದೀಪ್ ತಮ್ಮ 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿಲ್ಲ ಎಂದು ಹೇಳಿದ್ದರೂ, ನಿನ್ನೆ ತಡ ರಾತ್ರಿ ನೂರಾರು ಅಭಿಮಾನಿಗಳು ಸುದೀಪ್ ಮನೆ ಮುಂದೆ ಜಮಾಯಿಸಿದ್ದರು.

ಬೆಂಗಳೂರು(ಸೆ.02): ಅಭಿನಯ ಚಕ್ರವರ್ತಿ ಸುದೀಪ್ ತಮ್ಮ 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿಲ್ಲ ಎಂದು ಹೇಳಿದ್ದರೂ, ನಿನ್ನೆ ತಡ ರಾತ್ರಿ ನೂರಾರು ಅಭಿಮಾನಿಗಳು ಸುದೀಪ್ ಮನೆ ಮುಂದೆ ಜಮಾಯಿಸಿದ್ದರು.

ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಕಿಚ್ಚ ಸುದೀಪ್ ನಿವಾಸದ ಎದುರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಹೇಳಿದ್ರು. ಸುದೀಪ್ ವಿಲನ್ ಚಿತ್ರದ ಶೂಟಿಂಗ್ ಗಾಗಿ ಚಿಕ್ಕಮಗಳೂರಿಗೆ ಹೋಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿರಲಿಲ್ಲ. ಮನೆಯಲ್ಲಿ ಸುದೀಪ್ ಇಲ್ಲ ಅಂತಾ ಹೇಳಿದ್ರೂ, ಕೇಳಿದ ಅಭಿಮಾನಿಗಳು ಸುದೀಪ್ ದರ್ಶನಕ್ಕಾಗಿ ಕಾದು ನಿಂತಿದ್ರು.

ಕೊನೆಗೆ ಪೊಲೀಸರು ಸೇರಿದ್ದ ಗುಂಪು ಚದುರಿಸಿದ್ರು. ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದ ರನ್ನ. ಬರ್ತಡೇಗೆ ಖರ್ಚು ಮಾಡುವ ಹಣವನ್ನು ಅನಾಥ ಆಶ್ರಮ ,ಬಡವರಿಗೆ ಮತ್ತು ನಿರಾಶ್ರಿತರಿಗೆ ನೀಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ರು.