ಗುಡ್ ನ್ಯೂಸ್ ಸಿನಿಮಾದ ಮೂಲಕ ಯಶಸ್ಸಿನ ಅಮಲಿನಲ್ಲಿರುವ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಇದೇ  ಮೊದಲ ಸಾರಿ ಲಸ್ಟ್ ಸ್ಟೋರಿಸ್ ನಲ್ಲಿ ತಾವು ಕಾಣಿಸಿಕೊಂಡಿದ್ದ ಹಸ್ತಮೈಥುನದ ದೃಶ್ಯದ ಬಗ್ಗೆ ಮಾತನಾಡಿದ್ದಾರೆ.

ಮಹಿಳೆಯಾಗಿ ಹಸ್ತಮೈಥುನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಡ್ವಾಣಿ ಟ್ರೋಲ್ ಆಗಿದ್ದರು. ಈಗ ಹಸ್ತಮೈಥುನದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುವ ದೃಶ್ಯ ವೈರಲ್

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಟ್ರೋಲ್ ಮಾಡಿದ ನಂತರ ನನಗೆ ಮುಜುಗರ ಆಗಿತ್ತು. ಆ ಸಮಯದ ಬಗ್ಗೆ ಹೆಚ್ಚಿಗೆ ಏನೂ ಮಾತನಾಡಲ್ಲ. ನಾನು ಅಪ್ ಸೆಟ್ ಆಗಿದ್ದು ನಿಜ.  ನಿರ್ದೇಶಕ ಕರಣ್ ತಮ್ಮದೇ ಆಲೋಚನೆಯಲ್ಲಿ ಆ ಸನ್ನಿವೇಶವನ್ನು  ಚಿತ್ರಿಸಬಯಸಿದ್ದರು. ಅದಕ್ಕೊಂದು ಅರ್ಥ ನೀಡಬೇಕಾಗುತ್ತು.  ನಾನು ಮೊದಲಿನಿಂದಲೂ ನಿರ್ದೇಶಕರ ನಟಿ ಎಂದು ಅಡ್ವಾಣಿ ಹೇಳಿದರು.

ವೆಬ್ ಸೀರಿಸ್ ಮಾದರಿಯಲ್ಲಿ ಪ್ರಸಾರವಾದ ಲಸ್ಟ್ ಸ್ಟೋರಿಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಚರ್ಚೆಗಳಾಗಿದ್ದವು.