ಮುಂಬೈ:  ಕರಣ್ ಜೋಹಾರ್, ಜೋಯಾ ಅಕ್ತರ್, ಅನುರಾಗ್ ಕಶ್ಯಪ್ ಅವರ 'ಲಸ್ಟ್ ಸ್ಟೋರಿ' ಚಿತ್ರ ಬಿಡುಗಡೆಯಾದ ನಂತರ ಚಿತ್ರದ ದೃಶ್ಯಗಳು ವೀಕ್ಷಕರ ಮನದಲ್ಲಿ ಅಚ್ಚೊತ್ತಿದ್ದವು. ಆ ಚಿತ್ರದಲ್ಲಿ ಕಿಯಾರ ಅಡ್ವಾಣಿ ಅದ್ಭುತವಾಗಿ ನಟಿಸಿದ್ದು, ಹೆಣ್ಣು ತನ್ನ ಹಸಿವು, ನಿದ್ರೆ ಪೂರೈಸಿಕೊಳ್ಳುವಂತೆ ಲೈಂಗಿಕ ಬಯಕೆಯನ್ನೂ ತೀರಿಸಿಕೊಳ್ಳಬೇಕೆಂದೂ ವಿವರಿಸಲಾಗಿದೆ.

ಮಗಳು ಹಸ್ತ ಮೈಥುನ ಮಾಡಿಕೊಳ್ಳುವುದ ನೋಡಿದೆ, ಏನು ಮಾಡಲಿ?

ಈ ಲಸ್ಟ್ ಸ್ಟೋರಿ ಚಿತ್ರದ ಅನೇಕ ದೃಶ್ಯಗಳು ಹಲವು ಚರ್ಚೆಗಳಿಗೆ ನಾಂದಿ ಹಾಡಿತ್ತು. ಮಹಿಳೆಯರ ಲೈಂಗಿಕಾಸಕ್ತಿಯನ್ನು ಈ ಚಿತ್ರದಲ್ಲಿ ತೋರಿಸುವ ಮೂಲಕ ಹತ್ತು ಹಲವು ವಿವಾದಕ್ಕೆ ಎಡೆ ಮಾಡಿ ಕೊಟ್ಟರೂ, ಆರೋಗ್ಯಯುತ ಚರ್ಚೆಗೂ ಆಸ್ಪದ ಮಾಡಿ ಕೊಟ್ಟಿತ್ತು. ಅಲ್ಲದೇ ಕನ್ನಡದಲ್ಲಿ ಶ್ರುತಿ ಹರಿಹರನ್ ನಟನೆಯ 'ನಾತಿಚರಾಮಿ'ಯೂ ಇಂಥದ್ದೇ ವಿಷಯವನ್ನು ಇಟ್ಟುಕೊಂಡು ಮಾಡಿದ ಚಿತ್ರ. ವಿಧವೆಯ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪರದಾಡುವ ಪರಿಸ್ಥಿತಿಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿತ್ತು. ಆದರೆ, ಕನ್ನಡಿಗರಿಗೆ ಯಾಕೋ ಈ ಸಬ್ಜೆಕ್ಟ್ ಇಷ್ಟವಾಗಲಿಲ್ಲವೆಂದು ಕಾಣಿಸುತ್ತದೆ. ಕರುನಾಡ ವೀಕ್ಷಕರು ಈ ಚಿತ್ರವನ್ನು ಒಪ್ಪಿಕೊಳ್ಳಲೇ ಇಲ್ಲ. ಆ ಮೂಲಕ ಹೆಣ್ಣಿಗೂ, ಗಂಡಿನಷ್ಟೇ ಅಗತ್ಯವಿರುವ ಲೈಂಗಿಕ ದಾಹದ ವಿಷಯ ಚರ್ಚೆಯಾಗಲೇ ಇಲ್ಲ. ಅಂಥದ್ದೊಂದು ಭಾವನೆಯನ್ನು ಹೆಣ್ಣು ಅಭಿವ್ಯಕ್ತಗೊಳಿಸುವುದು ತಪ್ಪೆಂದು ಈಗಾಗಲೇ ಸಮಾಜದಲ್ಲಿರುವ ಅಭಿಪ್ರಾಯಕ್ಕೇ ಮಂದಿ ಅಂಟಿ ಕೊಂಡಿದ್ದಾರೆಂಬುವುದು ಖಚಿತವಾಯಿತು.  

ಭಾರತದಲ್ಲಿ ಮಡಿವಂತಿಕೆಯ ವಿಷಯವಾಗಿರುವ ಲೈಂಗಿಕ ಆರೋಗ್ಯ, ಲೈಂಗಿಕ ಶಿಕ್ಷಣದ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ವಿಷಯವಾಗಿ ಹತ್ತು ಹಲವು ಮಂದಿ ಮುಕ್ತವಾಗಿಯೂ ಮಾತನಾಡಿದ್ದಾರೆ. ಆ ಮೂಲಕ ಹೆಣ್ಣಿನ ಭಾವನೆ, ಅವಳ ಲೈಂಗಿಕ ಅಭಿಲಾಷೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವ ಯತ್ನ ಸಾಗಿದೆ. 

ನಿಮ್ಮ ಮಗು ಪೋರ್ನ್ ವೀಡಿಯೋ ನೋಡುತ್ತಿದ್ಯಾ?

ಇಂಥ ಮಡಿವಂತಿಕೆಯ ವಿಷಯವನ್ನೂ ಕೆಲವರು ನವಿರಾಗಿಯೆ ವಿವರಿಸಲು ಯತ್ನಿಸಿದ್ದಾರೆ. ಹತ್ತು ಹಲವು ಮುಂದಿ ಚಲನಚಿತ್ರಗಳ ಮೂಲಕ ಹೇಳಲು ಯತ್ನಿಸಿದರೆ, ಮತ್ತೆ ಕೆಲವರು ಬರವಣಿಗೆ ಮೂಲಕ, ಇನ್ನು ಹಲವರು ಸೋಷಿಯಲ್ ಮೀಡಿಯಾ ಮೂಲಕ ಈ ವಿಷಯವಾಗಿ ಮಾತನಾಡಲು, ಚರ್ಚಿಸಲು ಯತ್ನಿಸಿದ್ದಾರೆ. ಸ್ತ್ರೀ ಸ್ವಾತಂತ್ರ್ಯ, ಸ್ತೀಯರ ಸಂವೇದನೆ ಬಗ್ಗೆ ಆಗಾಗ ಚರ್ಚೆಯಾಗುವಂತೆ ಹೆಣ್ಣಿನ ಲೈಂಗಿಕಾಸಕ್ತಿ ಬಗ್ಗೆಯೂ ಸಹಜವಾಗಿ ಚರ್ಚಿಸಿದ್ದಾರೆ ಸ್ಟಾಂಡ್ ಅಪ್ ಕಾಮಿಡಿಯನ್ ಸುಮುಖಿ ಸುರೇಶ್. ಇವರಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುವ ಬಗ್ಗೆ ಆಕೆ ತಮ್ಮ ಮಾತುಗಳಲ್ಲಿಯೇ ವಿವರಿಸಿದರು.

ಇತಿ ಮಿತಿಯಲ್ಲಿದ್ದರೆ ಆಫೀಸ್ ಫ್ಲರ್ಟಿಂಗ್ ಒಂಥರ ಒಳ್ಳೇದು

ಅಲ್ಲದೇ  ಮೊದಲ ಲಸ್ಟ್ ಸ್ಟೋರಿಯ ರಾಧಿಕಾ ಆಪ್ಟೆ ದೃಶ್ಯಗಳನ್ನೂ ಸೇರಿಸಿದ ಸುಮುಖಿ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. #LustStoriesforWomen ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ನಲ್ಲಿ  ವೈರಲ್ ಆಗಿತ್ತು. ಅಲ್ಲದೇ ಅನೇಕ ಮಹಿಳೆಯರು ಲಸ್ಟ್ ಸ್ಟೋರೀಸ್‌ನಂತೆ ತಮ್ಮ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದರು. ಟ್ವಿಟ್ಟರ್‌ನಲ್ಲಿ ಮಹಿಳೆಯರು ಹಸ್ತ ಮೈಥುನದ ಬಗ್ಗೆ ಅನುಭವ ಹೇಳಿಕೊಂಡು, ಪುರುಷನಷ್ಟೇ ಮಹಿಳೆಗೂ ಕೂಡ ತನ್ನ ಲೈಂಗಿಕ ಬಯಕೆ ತೀರಿಸಿಕೊಳ್ಳುವ ಹಕ್ಕಿದೆ ಎಂಬ ವಿಷಯವನ್ನು ಒತ್ತಿ ಹೇಳಿದ್ದಾರೆ. ಅಷ್ಟಕ್ಕೂ ಸುಮುಖಿ ಹೇಳಿದ್ದೇನು? ನೀವೇ ಕೇಳಿ ಕೊಳ್ಳಿ, ಅಭಿಪ್ರಾಯ ತಿಳಿಸಿ....