ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸ್ಯಾಂಡಲ್ ವುಡ್ ಬಹುಬೇಡಿಕೆ ನಿರ್ದೇಶಕ. ಇವರ ನಿರ್ದೇಶನಕ್ಕೆ ಸಾಕಷ್ಟು ನಟರು ಕಾದು ಕುಳಿತಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. 

'ಸುಬ್ಬಲಕ್ಷ್ಮೀ ಸಂಸಾರ' ದ ಸುಬ್ಬಿಯ ಹಿಂದಿನ ಕಥೆ!

ಇವರು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳುವ ಪ್ರಸ್ತಾಪವೊಂದನ್ನು ನಯವಾಗಿ ತಿರಸ್ಕರಿಸಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಹೌದಾ..! ಮಹೇಶ್ ಬಾಬು ಸಿನಿಮಾವನ್ನು ತಿರಸ್ಕರಿಸಿದ್ರಾ? ಎಂದು ಅಚ್ಚರಿಪಡಬೇಡಿ. ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.

'ಮಗಳು ಜಾನಕಿ' ಧಾರಾವಾಹಿಗೆ ಗುಡ್‌ ಬೈ ಹೇಳಿದ ಹರಿ ಕುಮಾರ್!

ಮಹೇಶ್ ಬಾಬು ಮಾಸ್ ಸಿನಿಮಾಗಳಿಗೆ ಹೊಂದುವುದಿಲ್ಲ. ಇಂತಹ ಸಿನಿಮಾಗಳಿಗೆ ಟೈಗರ್ ಜೂ. ಎನ್ ಟಿಆರ್ ಹಾಕಿಕೊಂಡು ಸಿನಿಮಾ ಮಾಡುವ ಪ್ಲಾನ್ ನಲ್ಲಿದ್ದಾರೆ ಪ್ರಶಾಂತ್ ನೀಲ್. ಇದಕ್ಕೆ ಜೂ. ಎನ್ ಟಿಆರ್ ಡೇಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕೆಜಿಎಫ್ -2 ನಲ್ಲಿ ಬ್ಯುಸಿಯಾಗಿದ್ದಾರೆ.