ಸ್ಯಾಂಡಲ್‌ವುಡ್ ತಾರೆಯರ ‘ಕನ್ನಡ ಚಲನಚಿತ್ರ ಕಪ್’ ಮೂರನೇ ಆವೃತ್ತಿ ಶುರುವಾಗುತ್ತಿದೆ. ಸೆಪ್ಟಂಬರ್ 6 ರಿಂದ 8 ರವೆರೆಗೆ ಮೂರು ದಿನಗಳ ಕಾಲ ಕೆಸಿಸಿ ಕ್ರಿಕೆಟ್ ಪಂದ್ಯಾವಳಿ ಮೈಸೂರಿನಲ್ಲಿ ನಡೆಯುತ್ತಿದೆ.
ಬೆಂಗಳೂರು (ಜು. 31): ಸ್ಯಾಂಡಲ್‌ವುಡ್ ತಾರೆಯರ ‘ಕನ್ನಡ ಚಲನಚಿತ್ರ ಕಪ್’ ಮೂರನೇ ಆವೃತ್ತಿ ಶುರುವಾಗುತ್ತಿದೆ. ಮೊದಲ ಹಾಗೂ ಎರಡನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಈಗ ಕೆಸಿಸಿ ಮೂರನೇ ಆವೃತ್ತಿಗೆ ಭರ್ಜರಿ ಸಿದ್ಧತೆ ನಡೆದಿದೆ.
ಕೆಸಿಸಿ ರೂವಾರಿ ಕಿಚ್ಚ ಸುದೀಪ್ ಈಗಾಗಲೇ ಮೂರನೇ ಸೀಸನ್ ದಿನಾಂಕ ಪ್ರಕಟಿಸಿದ್ದಾರೆ. ಸೆಪ್ಟಂಬರ್ 6 ರಿಂದ 8 ರವೆರೆಗೆ ಮೂರು ದಿನಗಳ ಕಾಲ ಕೆಸಿಸಿ ಕ್ರಿಕೆಟ್ ಪಂದ್ಯಾವಳಿ ಮೈಸೂರಿನಲ್ಲಿ ನಡೆಯುತ್ತಿದೆ. ಪ್ರತಿ ತಂಡವು ಈ ಬಾರಿ ಐದು ಪಂದ್ಯಗಳಲ್ಲಿ ಆಡಲಿವೆ.
ಮೈಸೂರಿನ ಜನತೆಗೆ ಈ ಬಾರಿ ಸ್ಯಾಂಡಲ್‌ವುಡ್ ತಾರೆಯರ ಕ್ರಿಕೆಟ್ ಪಂದ್ಯ ವೀಕ್ಷಿಸುವ ಸುವರ್ಣಾವಕಾಶ ಲಭ್ಯವಾಗುತ್ತಿದೆ. ಸೀಸನ್ 3 ರಲ್ಲಿ ಸಂಗ್ರಹವಾಗಿದ್ದ ಹಣವನ್ನು ಕೊಡಗಿನ ನೆರೆ ಸಂತ್ರಸ್ಥರಿಗೆ ನೀಡಲಾಗಿತ್ತು. ಈ ಬಾರಿ ಕೆಸಿಸಿ ಪಂದ್ಯಗಳಿಂದ ಸಂಗ್ರಹವಾಗುವ ಹಣವನ್ನು ಯಾವುದಕ್ಕೆ ನೀಡಲಾಗುತ್ತಿದೆ ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ಆದರೆ ಪಂದ್ಯ ಕುತೂಹಲ ಹೆಚ್ಚಾಗುತ್ತಿದೆ.
