ಕೌನ್ ಬನೇಗಾ ಕೋಟ್ಯಧಿಪತಿ ಸೀಸನ್ 10 ರಲ್ಲಿ ಗೆದ್ದು ಕೋಟಿ ಗಳಿಸಿದ ಬಿನಿತಾ ಜೈನ್ ಸಿಂಗಲ್ ಪೇರೆಂಟ್ ಆಗಿದ್ದು ಅವರ ಯಶೋಗಾಥೆ ಇಲ್ಲಿದೆ.
ಮುಂಬೈ : ಹಿಂದಿಯ ಕೋಟ್ಯಧಿಪತಿ ರಿಯಾಲಿಟಿ ಶೋ 10ನೇ ಸಂಚಿಕೆಯಲ್ಲಿ ಕೋಟ್ಯಧಿಪತಿಯಾದ ಬಿನಿತಾ ಜೈನ್ ಅವರ ಜೀವನ ಹೂವಿನ ಹಾದಿಯಾಗಿರಲಿಲ್ಲ. ಕಲ್ಲು ಮುಳ್ಳುಗಳ ಹಾದಿಯನ್ನು ತುಳಿದು ಇದೀಗ ಕೊಟ್ಯಧಿತಿಯಾಗಿದ್ದಾರೆ.
ಅಸ್ಸಾಂನ ಗುವಾಹಟಿ ನಿವಾಸಿಯಾಗಿರುವ ಬಿನಿತಾ ಸಿಂಗಲ್ ಪೇರೆಂಟ್ ಆಗಿದ್ದಾರೆ. ಓರ್ವ ಮಗಳು ಹಾಗೂ ಮಗನ ತಾಯಿಯಾಗಿದ್ದಾರೆ
14 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ 1 ಕೋಟಿ ಗೆದ್ದುಕೊಂಡಿದ್ದಾರೆ.
2003ರ ಫೆಬ್ರವರಿಯಲ್ಲಿ ಬಿನಿತಾ ಪತಿ ಬ್ಯುಸಿನೆಸ್ ಟ್ರಿಪ್ ಎಂದು ಅಂತರರಾಜ್ಯ ಪ್ರವಾಸಕ್ಕೆ ತೆರಳಿದವರು ವಾಪಸಾಗಲಿಲ್ಲ. ಅನೇಕ ಕಾಲಗಳವರೆಗೂ ಕೂಡ ಪತಿಯನ್ನು ಹುಡುಕಿದರು ಅವರು ಪತ್ತೆಯಾಗಲಿಲ್ಲ. ಆದರೂ ಬಿನಿತಾ ಕುಟುಂಬ ಇಂದಿಗೂ ಕೂಡ ಗಂಡ ವಾಪಸಾಗಬಹುದು ಎಂಬ ಭರವಸೆಯನ್ನು ಬಿಟ್ಟಿಲ್ಲ.
ಇಷ್ಟೆಲ್ಲಾ ಆದ ಬಳಿಕ ಶಿಕ್ಷಕಿ ವೃತ್ತಿಯನ್ನು ಆಯ್ದುಕೊಂಡ ಬಿನಿತಾ ಮಕ್ಕಳಿಗಾಗಿ ತಮ್ಮ ಜೀವನದ ಪತವನ್ನು ಉತ್ತಮವಾಗಿಸಿಕೊಳ್ಳುವ ಯತ್ನದಲ್ಲೇ ಸಾಗಿದರು.
ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಅವರು ಕೊಟ್ಯಧಿಪತಿ ರಿಯಾಲಿಟಿ ಶೋಗೆ ಹೋಗುವ ತೀರ್ಮಾನ ಮಾಡಿದರು. ಇದಕ್ಕೆ ಅನೇಕರಿಂದ ಪ್ರೋತ್ಸಾಹವು ದೊರಕಿದ್ದು ಕೋಟಿ ಗೆಲ್ಲಲು ಸಹಕಾರಿಯಾಯಿತು.
