ಬಾಲಿವುಡ್ ಬೆಡಗಿಯೊಬ್ಬರಿಗೆ ಕ್ರಿಕೆಟ್ ವರ್ಲ್ಡ್ ಕಪ್ ಆಡುವ ಆಸೆಯಂತೆ. ಹಾಗಾಗಿ ಅನುಷ್ಕಾ ಶರ್ಮಾಗೆ ಹೇಳಿ ವಿರಾಟ್ ಕೊಹ್ಲಿಗೆ ಶಿಫಾರಸ್ಸು ಮಾಡಿಸಿದ್ರಂತೆ. ಹೌದಾ ಯಾರಪ್ಪಾ ಆಕೆ ಎಂದು ಯೋಚಿಸ್ತಿದೀರಾ ? ಇಲ್ಲಿದೆ ನೋಡಿ.
ಬೆಂಗಳೂರು (ಜ. 23): ಕತ್ರಿನಾ ಕೈಫ್ ‘ಭಾರತ್’ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬಿಡುವಿದ್ದ ವೇಳೆಯಲ್ಲೇ ಬ್ಯಾಟ್ ಬೀಸಿ ಮುಂದಿನ ಕ್ರಿಕೆಟ್ ವಲ್ಡ್‌ರ್ ಕಪ್ ಮ್ಯಾಚ್‌ನಲ್ಲಿ ಇಂಡಿಯನ್ ಟೀಂ ಅನ್ನು ಪ್ರತಿನಿಧಿಸುವುದಕ್ಕಾಗಿ ಅಪ್ಲಿಕೇಷನ್ ಹಾಕಿ ಬಿಟ್ಟಿದ್ದಾರೆ. ಅದು ಗೆಳತಿ ಅನುಷ್ಕಾ ಶರ್ಮಾ ಮೂಲಕ.
ವಿಷಯ ಏನಪ್ಪಾ ಅಂತಂದ್ರೆ, ‘ಭಾರತ್’ ಸೆಟ್‌ನಲ್ಲಿ ಕತ್ರಿನಾ ಒಳ್ಳೆಯ ಅನುಭವಿ ಕ್ರಿಕೆಟರ್‌ನಂತೆ ಆಟವಾಡಿದ್ದ ವಿಡಿಯೋವನ್ನು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಅದರ ಕೆಳಗೆ ‘ಅನುಷ್ಕಾ ಶರ್ಮಾ, ನಿನ್ನ ಪತಿ ವಿರಾಟ್ ಕೊಹ್ಲಿಗೆ ಕ್ರಿಕೆಟ್ ವಲ್ಡ್‌ರ್ ಕಪ್ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೇರಿಸುವಂತೆ ಹೇಳು, ಏನಿಲ್ಲವೆಂದರೂ ಒಳ್ಳೆಯ ಆಲ್‌ರೌಂಡರ್ ಪ್ರದರ್ಶನ ನೀಡಿಯೇ ನೀಡುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ.
ಇದಾಗುತ್ತಿದ್ದಂತೆಯೇ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿಯಾಗಿರುವ ಪ್ರೀತಿ ಝಿಂಟಾ, ಕತ್ರಿನಾ ಪೋಸ್ಟ್‌ಗೆ ಕಮೆಂಟ್ ಮಾಡಿ ‘ದಯವಿಟ್ಟು ನಮಗೂ ಆಟವಾಡಲು ಅವಕಾಶ ಕೊಡಿಸು’ ಎಂದು ಕಾಲೆಳೆದಿದ್ದಾರೆ. ಇನ್ನು ಇದೇ ಸೆಟ್‌ನಲ್ಲಿ ಸಲ್ಮಾನ್ ಖಾನ್ ಕೂಡ ಭರ್ಜರಿಯಾಗಿ ಬ್ಯಾಟ್ ಬೀಸಿ ತಮ್ಮ ಪ್ರತಿಭೆ ತೋರಿರುವುದು ವಿಶೇಷ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 23, 2019, 4:09 PM IST