ಬ್ರೇಕ್ ಅಪ್ ಆದವರಿಗೆ ಕತ್ರಿನಾ ಸಲಹೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Dec 2018, 2:13 PM IST
Katrina Kaif says her breakup was a blessing
Highlights

ಲವ್ ಬ್ರೇಕ್ ಅಪ್ ಆದವರಿಗೆ ಕತ್ರಿನಾ ಸಲಹೆ | ರಣಬೀರ್ ಜೊತೆ ಬ್ರೇಕ್ ಅಪ್ ಆದದ್ದು ಒಳ್ಳೆದಾಯ್ತು ಅಂದ ಕತ್ರಿನಾ 

ಮುಂಬೈ (ಡಿ. 05): ‘ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು’ ಎಂದು ಕನ್ನಡದಲ್ಲಿ ಒಂದು ಹಾಡಿದೆ. 2016 ರಲ್ಲಿ ಈ ಹಾಡು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ಗೆ ಅಚ್ಚುಕಟ್ಟಾಗಿ ಹೊಂದುತ್ತಿತ್ತು ಅನ್ನಿಸುತ್ತೆ. ಯಾಕೆಂದರೆ ರಣಬೀರ್ ಕಪೂರ್‌ನ ಪ್ರೀತಿಯಿಂದ ದೂರವಾಗಿ ವಿರಹದ ಕ್ಷಣಗಳನ್ನು ಲೆಕ್ಕ ಮಾಡುತ್ತಿದ್ದಳು ಕತ್ರಿನಾ.

ಆದರೆ ಆ ಕ್ಷಣಗಳು ಕತ್ರಿನಾ ಬದುಕನ್ನು ಕಿತ್ತುಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟು ಗಟ್ಟಿಗಿತ್ತಿಯಾಗಿ ಮುನ್ನುಗ್ಗುವುದನ್ನು ಕಲಿಸಿದೆ. ಇದನ್ನು ಯಾರೋ ಹೇಳಿದ್ದಲ್ಲ, ಸ್ವತಃ ಕತ್ರಿನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ರಣಬೀರ್ ಕಪೂರ್ ಮತ್ತು ನಾನು ಬ್ರೇಕ್‌ಅಪ್ ಆಗಿದ್ದು ನನ್ನ ಪಾಲಿನ ಪುಣ್ಯ. ಇದಾಗದೇ ಇದ್ದರೆ ನಾನು ಭಾವಲೋಕದಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಯಾವಾಗ ನನ್ನ ಅವನ ನಡುವೆ ಗೋಡೆ ನಿರ್ಮಾಣವಾಯಿತೋ, ಆಗ ನನಗೆ ಬೇರೆಯದ್ದೇ ಲೋಕ ಕಾಣಿಸಿತು. ನಾನು, ನನ್ನ ಸಿನಿಮಾ, ನನ್ನ ಬದುಕು ಎನ್ನುವ ಕಡೆ ದೃಷ್ಟಿ ನೆಟ್ಟೆ. ಆದ ಕಾರಣ ನಾನು ಇಂದು ನಾನಾಗಿದ್ದೇನೆ. ಆ ಲೆಕ್ಕದಲ್ಲಿ ಒಂದು ಬ್ರೇಕ್‌ಅಪ್ ನನ್ನ ಪಾಲಿಗೆ ವರವಾಯಿತು’ ಹೀಗೆ ಲವ್ ಬ್ರೇಕ್‌ಅಪ್‌ನಿಂದ ತನಗಾದ ಅನುಕೂಲವನ್ನು ಹೇಳಿಕೊಂಡು ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿ ಪ್ರೀತಿಯ ವಿರಹದಲ್ಲೇ ನರಳದೇ ಬದುಕನ್ನು ಸವಿಯಿರಿ

loader