ಸಲ್ಮಾನ್ ಖಾನ್ ಮುಂಬರುವ ಚಿತ್ರ ’ಭರತ್’ ದಲ್ಲಿ ಪ್ರಿಯಾಂಕ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ನಿಕ್ ಜೋನಾಸ್ ಜೊತೆ ಮದುವೆಯಾಗಲು ಪಿಗ್ಗಿ ಚಿತ್ರದಿಂದ ಹೊರ ಹೋಗಿದ್ದರು. ಅವರ ಸ್ಥಾನಕ್ಕೆ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಸಲ್ಲುಗೆ ಜೊತೆ ಸಿಕ್ಕಿದ್ದಾರೆ. ಪಿಗ್ಗಿ ಸ್ಥಾನದಲ್ಲಿ ಕತ್ರಿನಾ ಕೈಫ್ ಆ್ಯಕ್ಟ್ ಮಾಡಲಿದ್ದಾರೆ. 

ಮುಂಬೈ (ಜು. 30): ಸಲ್ಮಾನ್ ಖಾನ್ ಭರತ್ ಚಿತ್ರ ಕೆಲ ದಿನಗಳಿಂದ ಸುದ್ದಿಯಾಗಿತ್ತು. ಏನಪ್ಪಾ ಅದು? ಅಂತದ್ದೇನಾಯ್ತು ಅಂತೀರಾ? ಈ ಸುದ್ದಿ ಓದಿ. 

ಸಲ್ಮಾನ್ ಖಾನ್ ಮುಂಬರುವ ಚಿತ್ರ ’ಭರತ್’ ದಲ್ಲಿ ಪ್ರಿಯಾಂಕ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ನಿಕ್ ಜೋನಾಸ್ ಜೊತೆ ಮದುವೆಯಾಗಲು ಪಿಗ್ಗಿ ಚಿತ್ರದಿಂದ ಹೊರ ಹೋಗಿದ್ದರು. ಅವರ ಸ್ಥಾನಕ್ಕೆ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಸಲ್ಲುಗೆ ಜೊತೆ ಸಿಕ್ಕಿದ್ದಾರೆ. ಪಿಗ್ಗಿ ಸ್ಥಾನದಲ್ಲಿ ಕತ್ರಿನಾ ಕೈಫ್ ಆ್ಯಕ್ಟ್ ಮಾಡಲಿದ್ದಾರೆ. 

ಸೆಪ್ಟೆಂಬರ್’ನಿಂದ ಶೂಟಿಂಗ್ ಆರಂಭವಾಗಲಿದೆ. ಕತ್ರಿನಾ ಕೈಫ್ ಹಾಗೂ ಸಲ್ಲು ಟೈಗರ್ ಜಿಂದಾ ಹೈ, ಏಕ್ತಾ ಟೈಗರ್ ಸೇರಿದಂತೆ ಸಾಕಷ್ಟು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗುತ್ತದೆ. 

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಜೊತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ ಎಂದು ಭರತ್ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಹೇಳಿದ್ದಾರೆ.

Scroll to load tweet…