ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ | ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಬಂದಿದೆ ಇಲ್ಲಿದೆ ನೋಡಿ 

ಬೆಂಗಳೂರು (ಅ. 01): ಪ್ರತಿ ವರ್ಷ ಕೊಡುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಪ್ರತಿಷ್ಠಿತ ಪ್ರಶಸ್ತಿಗಳಾದ ಡಾ. ರಾಜ್ ಕುಮಾರ್ ಪ್ರಶಸ್ತಿ ಬಹುಭಾಷಾ ತಾರೆ ಲಕ್ಷ್ಮೀ ಅವರಿಗೆ ದೊರಕಿದೆ. ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಕ್ಷ್ಮೀಪತಿಯವರಿಗೆ ದೊರಕಿದೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಎನ್ ನಾರಾಯಣ್ ಅವರಿಗೆ ಸಿಕ್ಕಿದೆ. 

2017 ನೇ ಸಾಲಿನಲ್ಲಿ ಬ್ಯೂಟಿಫುಲ್ ಚಿತ್ರಕ್ಕಾಗಿ ಶೃತಿ ಹರಿಹರನ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು. ಅಮರಾವತಿ ಚಿತ್ರಕ್ಕಾಗಿ ಅಚ್ಯುತ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಅದೇ ರೀತಿ ಅತ್ಯುತ್ತಮ ಗಾಯಕ ಪ್ರಶಸ್ತಿ ವಿಜಯ್ ಪ್ರಕಾಶ್ ಪಾಲಾದರೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಸಂಗೀತ ರವೀಂದ್ರನಾಥ್ ಪಾಲಾಗಿತ್ತು.

ಸಿನಿಮಾ ರಂಗದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುವುದು.