ಆದರೆ, ಹೀಗೆ ಮರು ಬಳಕೆಯಾಗಿರುವ ಟೈಟಲ್‌ಗಳು ಕೇವಲ ಪ್ರಚಾರದ ದೃಷ್ಟಿಯಿಂದಲೇ ಹೊರತು, ಯಾವುದೇ ಅಭಿಮಾನದಿಂದಲ್ಲ ಎಂಬುದು ಡಾ ರಾಜ್‌ಕುಮಾರ್ ಅಭಿಮಾನಿಗಳ ಬೇಸರ. ಅಭಿಮಾನಿಗಳ ಈ ಬೇರಸ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ತಲುಪಿದೆ. 

ಅರಾಧ್ಯ ದೈವ ಮುತ್ತುರಾಜ್ ಅಭಿಮಾನಿ ಬಳಗದ ಕಾರ್ಯಕರ್ತರು ರಾಘಣ್ಣ ಅವರನ್ನು ಭೇಟಿ ಮಾಡಿ, ‘ಡಾ ರಾಜ್‌ಕುಮಾರ್ ಕುಟುಂಬದವರು ಅಣ್ಣಾವ್ರ ಚಿತ್ರಗಳ ಹೆಸರುಗಳನ್ನು ಬಳಸಿಕೊಳ್ಳಲಿ. ಆದರೆ, ಬೇರೆಯವರು ಆ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರ ಚಿತ್ರಗಳ ಹೆಸರುಗಳಿಗೆ ಇರುವ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ. ಪ್ರಚಾರದ ದೃಷ್ಟಿಯಿಂದ ಮಾತ್ರ ಹೀಗೆ ಹೆಸರುಗಳನ್ನು ಬಳಸುತ್ತಿದ್ದಾರೆ. ಇಂಟರ್‌ನೆಟ್‌ನಲ್ಲಿ ‘ಶ್ರೀನಿವಾಸ ಕಲ್ಯಾಣ’ ಎಂದು ಹುಡುಕಿದರೆ ರಾಜ್ ಚಿತ್ರದ ಹೆಸರಿಗೆ ಬದಲಾಗಿ ಹೊಸಬರ ಚಿತ್ರದ ಮಾಹಿತಿ ತೋರಿಸುತ್ತಿದೆ. ಆ ಮೂಲಕ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನೇ ಮರೆ ಮಾಚುತ್ತಿದ್ದಾರೆ. ಹೀಗಾಗಿ ರಾಜ್ ಅವರ ಚಿತ್ರಗಳ ಶೀರ್ಷಿಕೆಗಳನ್ನು ಹೊರಗಿನವರು ಬಳಸಬಾರದು’ ಎಂಬುದು ಅಭಿಮಾನಿಗಳ ಒತ್ತಾಯ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿವರೆಗೂ ಈ ಬಗ್ಗೆ ಯಾವುದೇ ರೀತಿಯ ಮನವಿ ಬಂದಿಲ್ಲ. ಡಾ ರಾಜ್‌ಕುಮಾರ್ ಅವರ ಹೆಸರುಗಳನ್ನು ಮರು ಬಳಕೆ ಮಾಡಿಕೊಂಡು ಅವರ ಹೆಸರಿಕ್ಕೆ ದಕ್ಕೆ ತರುತ್ತಿರುವ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಅಭಿಮಾನಿಗಳು ನೀಡಿದರೆ ಖಂಡಿತ ನಾವು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿವರೆಗೂ ಆ ರೀತಿ ಆಗಿಲ್ಲ ಎಂಬುದು ನನ್ನ ಭಾವನೆ. ಆದರೂ ಅಭಿಮಾನಿಗಳ ಮನಸ್ಸಿಗೆ ನೋವಾಗಿರುವುದು ಕಂಡು ಬಂದರೆ ವಾಣಿಜ್ಯ ಮಂಡಳಿ ಈ ಕುರಿತು ಗಮನ ಕೊಡಲಿದೆ. ಲೆಜೆಂಡ್ ಕಲಾವಿದರ ಹೆಸರಿಗೆ ಕಳಂಕ ತರಬಾರದು ಎಂಬುದು ಎಲ್ಲರ ಕಳಕಳಿ. - ಚಿನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ರಾಘವೇಂದ್ರ ರಾಜ್‌ಕುಮಾರ್ ಅವರು, ರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ಅರಾಧ್ಯ ದೈವ. ಹಾಗೆ ಅಭಿಮಾನಿಗಳನ್ನೂ ಸಹ ಕೂಡ ಅಪ್ಪಾಜಿ ದೇವರಂತೆ ನೋಡುತ್ತಿದ್ದರು. ಹೀಗಾಗಿ ಅಭಿಮಾನಿಗಳಿಗೆ ನೋವಾಗುವಂತಹ ಬೆಳವಣಿಗೆಗಳು ನಡೆದರೆ ಆ ಬಗ್ಗೆ ನಾವು ಮಾತನಾಡುತ್ತೇವೆ. ಈಗ ಅವರ ಯಶಸ್ವಿ ಚಿತ್ರಗಳ ಟೈಟಲ್‌ಗಳನ್ನು ಮರು ಬಳಕೆ ಮಾಡಬಾರದು ಎಂಬುದರ ಬಗ್ಗೆ ಅಭಿಮಾನಿಗಳೇ ಸಹಿ ಸಂಗ್ರಹ ಅಭಿಯಾನ ಮಾಡಿಕೊಂಡು ಬರಲಿ.ನಾನೂ ಕೂಡ ಗಮನ ಕೊಡುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಮನವಿ ಮಾಡುತ್ತೇನೆ. ಆದರೆ, ಈ ವಿಚಾರದಲ್ಲಿ ಕುಟುಂಬದವರ ನಿಲುವಿಗಿಂತ ಅಭಿಮಾನಿಗಳ ಅಭಿಪ್ರಾಯ ಮುಖ್ಯ ಎಂದು ತಮ್ಮನ್ನು ಭೇಟಿ ಮಾಡಿದ್ದ ಅಭಿಮಾನಿಗಳಿಗೆ ಹೇಳಿದ್ದಾರೆ. 

ಡಾ ರಾಜ್‌ಕುಮಾರ್ ಅಭಿನಯದಲ್ಲಿ ಸತ್ಯಹರಿಶ್ಚಂದ್ರ, ಶ್ರೀನಿವಾಸ ಕಲ್ಯಾಣ, ಎರಡು ಕನಸು, ತಾಯಿಗೆ ತಕ್ಕ ಮಗ ಮುಂತಾದವು ಇತ್ತೀಚೆಗೆ ಬಂದ ಹೊಸ ಚಿತ್ರಗಳು.