ತುಮಕೂರು (ಫೆ. 12): ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಯಾವುದೇ ಭೇದ-ಭಾವವಿಲ್ಲದೇ ಬಂದಂತಹ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿದೆ. ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಮಾಡುತ್ತಿದ್ದ ಸಮಾಜಕಾರ್ಯ ಮುಂದುವರೆಯುತ್ತಿದೆ. ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. 

ಇದೀಗ ಫಿಲ್ಮ್ ಚೇಂಬರ್ ಕೂಡಾ ಅನ್ನದಾಸೋಹಕ್ಕೆ ನೆರವು ನೀಡಿದೆ. ಸಿದ್ಧಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದು ಅನ್ನದಾಸೋಹಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ್ದಾರೆ. 

ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಚೇಂಬರ್ ನ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ಭಾಮಾ ಹರೀಶ್, ಕರಿಸುಬ್ಬು, ಕೆ.ವಿ.ಚಂದ್ರಶೇಖರ್, ಜಯರಾಜ್, ಎನ್.ಎಂ.ಸುರೇಶ್ ಉಪಸ್ಥಿತರಿದ್ದರು.