ಅಸಹ್ಯ ಟ್ರೋಲ್'ಗಳಿಗೆ ಕಾರಣವಾದ ಸನ್ನಿ ಲಿಯೋನ್ ದಂಪತಿಯ ಚಿತ್ರ

Trolling Sunny Leone for bold picture with daughter is mindless
Highlights

  • ತಂದೆಯಂದಿರ ದಿನದ ಅಂಗವಾಗಿ ಇನ್ಸ್ಟಾಗ್ರಾಮ್'ನಲ್ಲಿ ಸನ್ನಿ ಪತಿ ಮಾಡಲಾದ ಚಿತ್ರ
  • ಅಸಹ್ಯ ಟ್ರೋಲ್'ಗಳನ್ನು ಮಾಡಿದ ಬೆಂಬಲಿಗರು  

ನವದೆಹಲಿ[ಜೂ.18]: ಬಾಲಿವುಡ್ ತಾರೆ ಸನ್ನಿ ಲಿಯೋನ್ ಕುಟುಂಬದ ಜೊತೆಯಿರುವ ಒಂದು ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಅಸಹ್ಯ ಟ್ರೋಲ್'ಗಳಿಗೆ ಕಾರಣವಾಗಿದೆ.

ಸನ್ನಿ ಪತಿ ಡೇನಿಯಲ್ ವೆಬರ್ ತಂದೆಯಂದಿರ ದಿನದ ಪ್ರಯುಕ್ತ ತಮ್ಮ ದತ್ತು ಪುತ್ರಿ ನಿಶಾ ಜೊತೆಯಿದ್ದ ಅರೆಬೆತ್ತಲೆ ಭಾವಚಿತ್ರವನ್ನು ಇನ್ಸ್ಟಾಗ್ರಾಮ್'ನಲ್ಲಿ ಪೋಸ್ಟ್ ಮಾಡಿದ್ದರು. ಅರೆಬೆತ್ತಲೆಯಾಗಿದ್ದ ಈ ಚಿತ್ರಕ್ಕೆ ಟ್ರೋಲ್'ಗಳ ಸುರಿಮಳೆಯೇ ಹರಿದಿದೆ.

ಇನ್ಸ್ಟಾಗ್ರಾಮ್'ನಲ್ಲಿ ಫೋಟೋದೊಂದಿಗೆ ಮಾಹಿತಿ ಶೇರ್ ಮಾಡಿಕೊಂಡಿದ್ದ ಡೇನಿಯಲ್ ಮಗಳು ನಿಶಾ ಹಾಗೂ ಸನ್ನಿ ಅವರಿಗೆ ತಂದೆ ದಿನದ ಪ್ರೀತಿಯನ್ನು ಹಂಚಿಕೊಂಡಿದ್ದರು.

ಬಾಲಿವುಡ್ ಸ್ಟಾರ್ ಆಗುವ ಮುನ್ನ ಅಮೆರಿಕಾದಲ್ಲಿ ಪೋರ್ನ್ ಸ್ಟಾರ್ ಆಗಿದ್ದ ಇವರನ್ನು ನೆನಪಿಸಿದ ಟ್ರೋಲರ್ 'ಒಮ್ಮೆ ಪೋರ್ನ್ ಸ್ಟಾರ್ ಆದರೆ ಯಾವಾಗಲು ಅವರು ಪೋರ್ನ್ ಸ್ಟಾರ್ ಆಗಿಯೇ ಇರುತ್ತಾರೆ ಎಂದು ತೆಗಳಿದ್ದಾನೆ.

ಮಗುವಿನ ಮುಂದೆ ಬೆತ್ತಲೆಯಾಗಿರುವುದಕ್ಕೆ ಅವರಿಗೆ ನಾಚಿಕೆಯಾಗುವುದಿಲ್ಲವೆ ಎಂದರೆ, ಮತ್ತೊಬ್ಬ ಲಿಯೋನ್ ತಮ್ಮ ಮಗಳನ್ನು ಪೋರ್ನ್ ಸ್ಟಾರ್ ಮಾಡಲು ಈಗಿನಿಂದಲೇ ಸಿದ್ಧತೆ ಮಾಡುತ್ತಿರುವಂತಿದೆ ಎಂದು ಟ್ರೋಲ್ ಮಾಡಿದ್ದಾನೆ. ಇಷ್ಟೆ ಅಲ್ಲದೆ ಇನ್ನು ಅಸಹ್ಯಕರವಾದ ಸಂದೇಶಗಳು ಇನ್ಸ್ಟಾಗ್ರಾಮ್'ನಲ್ಲಿ ವ್ಯಕ್ತವಾಗಿವೆ.

 

 

loader