ಸೋಶಿಯಲ್ ಮೀಡಿಯಾ ಯಾವ ಸಮಯದಲ್ಲಿ ಯಾವ ಫೋಟೋವನ್ನು ಶೇರ್ ಮಾಡುತ್ತದೆ. ಯಾವ ಕಾರಣಕ್ಕೆ ಶೇರ್ ಮಾಡುತ್ತದೆ ಎಂಬ ಸೂಚನೆ ಯಾರಿಗೂ ಇರುವುದಿಲ್ಲ. ಅಂಥದ್ದೆ ಒಂದು ಪೋಟೋ ಫುಲ್ ವೈರಲ್ ಆಗಿದೆ. ಏನು ಈ ಕತೆ?

ಮುಂಬೈ[ನ.09] ಮದುವೆಯಾದ್ಮೇಲೆ, ಅದರಲ್ಲಿಯೂ ಮಗುವಾದ ಮೇಲಂತೂ ಫಿಸಿಕ್ ಹಾಳು ಮಾಡಿಕೊಳ್ಳುವ ಎಲ್ಲ ಹೆಣ್ಣು ಮಕ್ಕಳಿಗೆ ಕರೀನಾ ಕಪೂರ್ ಮಾದರಿ. ಮಗುವಿನ ತಾಯಿಯಾದರೂ ಝೀರೋ ಸೈಜ್ ಮೆಂಟೈನ್ ಮಾಡಿದ ಈ ಬಾಲಿವುಡ್ ನಟಿ ಮತ್ತೆ ಗರ್ಭಿಣಿಯಾಗಿದ್ದಾರಾ? 

38 ವರ್ಷದ ಕರೀನಾಗೆ 2 ವರ್ಷದ ಮಗ ತೈಮೂರ್ ಇದ್ದಾನೆ. ಈಗ ಮತ್ತೆ ಗರ್ಭಿಣಿಯಾಗಿದ್ದಾರಾ। ಕರೀನಾ ಗರ್ಭಿಣಿಯಾಗಿರುವ ಪೋಟೋ ಒಂದು ವೈರಲ್ ಆಗಿದೆ. ಆದರೆ ಅದು ಎರಡು ವರ್ಷದ ಹಿಂದಿನ ಪೋಟೋ!

ಜೀಮ್‌ನಲ್ಲಿ ದಿನವೂ 55 ನಿಮಿಷ ಮಾತ್ರ ಕಳೆಯುವ ಕರೀನಾ, ಮಗ ತೈಮೂರ್ ಹುಟ್ಟಿದ ಮೇಲೂ 12 ಕೆ.ಜಿ ಕಡಿಮೆಯಾಗಿದ್ದಾಳೆ. ಕೇವಲ ಜಿಮ್ ಮಾತ್ರವಲ್ಲ, ನಿಯಮಿತವಾಗಿ ಪವರ್ ಯೋಗ ಮಾಡುವ ಕರೀನಾ, ತಿನ್ನೋ ವಿಷ್ಯದಲ್ಲಿಯೂ ಸಿಕ್ಕಾಪಟ್ಟೆ ಕಟ್ಟುನಿಟ್ಟು. ವೀರ್ ದಿ ವೆಡ್ಡಿಂಗ್ ಚಿತ್ರದಲ್ಲಿಯೂ ಕರೀನಾ ಕಾಣಿಸಿಕೊಂಡಿದ್ದರು.

Scroll to load tweet…
Scroll to load tweet…