ದೊಡ್ಡ ದೊಡ್ಡ ಸ್ಟಾರ್‌ ನಟ ನಟಿಯರು ತಮ್ಮ ಮಾತು, ನಡವಳಿಕೆ, ಸೌಂದರ್ಯದಿಂದ ಸದಾ ಸಮಾಜದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ಹೀಗೆ ಒಬ್ಬ ಸುಂದರ ನಟಿಯಿಂದ ಪ್ರಭಾವಕ್ಕೊಳಗಾದ ನಟಿ ಕಿಯಾರ ಅದ್ವಾನಿ. ಪ್ರಭಾವ ಬೀರಿದ ಚೆಲುವೆ ಕರೀನಾ ಕಪೂರ್‌.

ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

ಇದನ್ನು ಹೇಳಿದ್ದು ಸ್ವತಃ ಕಿಯಾರ. ‘ಜೀವನದಲ್ಲಿ ನಾನು ಇದುವರೆಗೂ ನೋಡಿದ ಅತಿ ಸುಂದರ ನಟಿ ಎಂದರೆ ಅದು ಕರೀನಾ ಕಪೂರ್‌. ಅವರ ಸೌಂದರ್ಯ, ನಟನೆಯನ್ನು ಚಿಕ್ಕಂದಿನಿಂದ ನೋಡುತ್ತಲೇ ಬೆಳೆದ ನಾನು ಅವರ ರೀತಿಯೇ ನಟಿಯಾಗಬೇಕು ಎಂದು ಸಿನಿಮಾ ರಂಗಕ್ಕೆ ಬಂದೆ’ ಎಂದು ಹೇಳುವುದರ ಜೊತೆಗೆ ಪ್ರೀತಿಯ ಕರೀನಾರನ್ನು ಹಳೆಯ ವೈನ್‌ಗೆ ಹೋಲಿಕೆ ಮಾಡಿದ್ದಾರೆ ಕೂಡ.

ಇಲ್ಲದ ಕಸ ಗುಡಿಸಿದ ಸಂಸದೆ ಹೇಮಾಮಾಲಿನಿಗೆ ಪತಿ ಧರ್ಮೇಂದ್ರ ಟಾಂಗ್!

‘ವೈನ್‌ ಹೆಚ್ಚು ಹಳೆಯದಾದಷ್ಟೂಅದರ ರುಚಿ ಮತ್ತು ತಾಕತ್ತು ಹೆಚ್ಚಾಗುತ್ತದೆ. ಅದೇ ರೀತಿ ಕರೀನಾ ವಯಸ್ಸಾದಷ್ಟೂನಟನೆಯಲ್ಲಿ ಹೆಚ್ಚು ಇಷ್ಟವಾಗುತ್ತಾರೆ. ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದ ನನಗೆ ಅವರೇ ದೊಡ್ಡ ಸ್ಫೂರ್ತಿ’ ಎಂದು ಹೇಳಿಕೊಂಡು ಕರೀನಾ ಕಪೂರ್‌ ಅವರ ಬಗ್ಗೆ ತಮಗಿರುವ ಗೌರವನ್ನು ಹೊರ ಹಾಕಿದ್ದಾರೆ ಬಾಲಿವುಡ್‌ನ ಬ್ಯುಸಿ ಬೆಡಗಿ ಕಿಯಾರ.